ಹಿಂದುಸ್ತಾನಿ ಬಾನ್ಸುರಿ ವಾದನ ಮತ್ತು ಗಾಯನ ಕಾರ್ಯಕ್ರಮ

1.Priya 2 copy
Published on

ಮೈಸೂರು: ಮೈಸೂರಿನ ಸ್ವರಸಂಕುಲ ಸಂಗೀತಸಭಾದ ವತಿಯಿಂದ ಜ.28 ರಂದು ಸಂಜೆ 5.30 ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಹಿಂದುಸ್ತಾನಿ ಬಾನ್ಸುರಿ ವಾದನ ಮತ್ತು ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೊದಲಿಗೆ ಸಮೀಕ್ಷಾ ಎಚ್. ವಿವೇಕ್ ಅವರಿಂದ ಬಾನ್ಸುರಿ ವಾದನ ಇರಲಿದೆ. ಅವರಿಗೆ ತಬಲಾದಲ್ಲಿ ಪಂ.ಕೇದಾರ್ ಸಾಯಿನಾಥ್ ಜೋಷಿ ಪಕ್ಕವಾದ್ಯ ನೀಡಲಿದ್ದಾರೆ.

ನಂತರ ವಿದುಷಿ. ಪ್ರಿಯಾ ಪುರುಷೋತ್ತಮನ್ ಅವರಿಂದ ನಡೆಯುವ ಹಿಂದುಸ್ತಾನಿ ಗಾಯನ ಕಾರ್ಯಕ್ರಮದಲ್ಲಿ ತಬಲಾ ಪಕ್ಕವಾದ್ಯದಲ್ಲಿ ಪಂ.ಸಾಗರ್ ಭರತ್ ರಾಜ್ ಮತ್ತು ಹಾರ್ಮೋನಿಯಂ ನಲ್ಲಿ ಪಂ.ವೀರಭದ್ರಯ್ಯ ಹಿರೇಮಠ್ ಅವರು ಸಹಕಾರ ನೀಡಲಿದ್ದಾರೆ.

ಭಾರತದ ಹಿಂದುಸ್ತಾನಿ ಸಂಗೀತದ ಹಾಡುಗಾರಿಕೆಯ ಉದಯೋನ್ಮುಖ ಗಾಯಕಿಯರಲ್ಲಿ, ಆಗ್ರಾ ಘರಾಣಾದ ಪ್ರಿಯಾ ಪುರುಷೋತ್ತಮನ್ ಹೆಸರು ಮುಂಚೂಣಿಯಲ್ಲಿದೆ. ಇವರು ವಿದುಷಿ ಅದಿತಿ ಉಪಾಧ್ಯ, ಪಂಡಿತ್ ಸುಧೀಂದ್ರ ಭೌಮಿಕ್ ಮತ್ತು ಪಂಡಿತ್ ದಿನಕರ್ ಕಾಯ್ಕಿಣಿಯವರ ಶಿಷ್ಯೆ. ಭಾರತ ಮತ್ತು ವಿದೇಶದ ಪ್ರಮುಖ ಸಂಗೀತ ವೇದಿಕೆಗಳಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net