ಲಾಭದಲ್ಲಿ ಮುನ್ನಡೆಯುತ್ತಿದೆ ಶಾಂತಪ್ಪಣ್ಣ ಮಿರಜಿ ಬ್ಯಾಂಕ್

31Ckd1
Published on

ಚಿಕ್ಕೋಡಿ: ಶಾಂತಪ್ಪಣ್ಣ ಮಿರಜಿ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 2.26 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಭಾತೆ ಹೇಳಿದರು.

ಇಲ್ಲಿನ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿ. ಶ್ರೀ ಶಾಂತಪ್ಪಣ್ಣ ಮಿರಜಿ 107ನೆಯ ಜಯಂತಿ ಹಾಗೂ 65ನೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬ್ಯಾಂಕ್ 14 ಶಾಖೆ, 13,134 ಸದಸ್ಯರು, 9.62 ಕೋಟಿ ರೂ. ಶೇರು ಬಂಡವಾಳ, 42.37 ಕೋಟಿ ರೂ. ನಿಧಿ, 258.68 ಕೋಟಿ ರೂ. ಠೇವು, 171.10 ಕೋಟಿ ರೂ. ಸಾಲ ವಿತರಿಸಿದೆ. 124.36 ಕೋಟಿ ರೂ. ಗುಂತಾವಣೆ, ಒಟ್ಟು 4.37 ಕೋಟಿ ರೂ.ಲಾಭ, 315.93 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ ಶೇ.15 ರಂತೆ ಲಾಭಾಂಶ ನೀಡಲಾಗುವುದು ಎಂದರು.

ಬ್ಯಾಂಕ್ ಉಪಾಧ್ಯಕ್ಷ ಅಮರನಾಥ ಬಸರಗಿ, ನಿರ್ದೇಶಕರಾದ ಯಶವಂತ ಮಿರಜಿ, ಈರಪ್ಪ ಹಂಪಣ್ಣವರ, ಸಂಜಯಕುಮಾರ ಪಾಟೀಲ, ಮಹಾವೀರ ಪಾಟೀಲ, ಮಾಲಾ ದೇಸಾಯಿ, ಸುರೇಶ ಘರಬುಡೆ, ರವಿಕುಮಾರ ರೋಖಡೆ, ಅಶೋಕ ದಾನವಾಡೆ, ಅನಿಲ ಸದಲಗೆ, ಮಹೇಶ ಲಡಗೆ, ಜಿತೇಂದ್ರ ಸಾಂಗಲೆ, ಮಹಾವೀರ ಮಿರಜಿ, ಪೂಜಾ ಪಟ್ಟಣಕುಡೆ, ರಮೇಶ ಧಾಮಣ್ಣವರ. ಅಜಿತ್ ಅಕ್ಕೋಳೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ, ಉದಯಕುಮಾರ ಮಾನೆ, ಸಚಿನ ಪಾಟೀಲ ಇತರರಿದ್ದರು. ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ವಂದೂರೆ ವಾರ್ಷಿಕ ವರದಿ ಓದಿದರು. ಪೂರ್ಣಿಮಾ ಕಗೂಡೆ ನಿರೂಪಿಸಿದರು. ಮಹಾವೀರ ಮಿರಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net