ಕೃಷಿಯೊಂದಿಗೆ ಹೈನುಗಾರಿಕೆ ಕೈಗೊಂಡರೆ ಲಾಭ ಅಧಿಕ

09 07 2025_BGR RURAL_PAGE_02
ನಡುವಿನಪುರದ ಶ್ರೀಅಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಎಸ್​ಎಫ್​ಎಸ್​ಸಿಎಸ್​ ನಿರ್ದೇಶಕರಾದ ಎಚ್​.ಎನ್​.ಧಮೇರ್ಶ್​, ಎನ್​.ಡಿ.ಬೈರೇಗೌಡ, ಗ್ರಾಪಂ ಸದಸ್ಯ ಎನ್​.ಎನ್​.ಮಂಜುನಾಥ್​, ಬಮುಲ್​ ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಡಾ.ಸಂತೋಷ್​ ಕುಮಾರ್​ ಇತರರಿದ್ದರು.
Published on

ನಂದಗುಡಿ : ಕೃಷಿಯೊಂದಿಗೆ ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಂಡರೆ ಅಧಿಕ ಲಾಭ ಗಳಿಸಿ, ಬದುಕಿನಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ಹೇಳಿದರು.

ಹೊಸಕೋಟೆ ತಾಲೂಕು ನಡುವಿನಪುರ ಶ್ರೀ ಅಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂದ 2024&25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ರೈತರು ಆರ್ಥಿಕ ಸದೃಢತೆ ಸಾಧಿಸಲು ಹೈನುಗಾರಿಕೆ ಸಹಕಾರಿಯಾಗಿದೆ. ಉತ್ಪಾದಕರೆಲ್ಲರೂ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಸಂವೂ ಪ್ರಗತಿಯತ್ತ ಸಾಲಗಲಿದೆ ಎಂದು ತಿಳಿಸಿದರು. ಬಮುಲ್​ ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಕೆ.ಶ್ರೀರಾಮ್​ ಮಾತನಾಡಿ, ಬಮುಲ್​ನಿಂದ ರೋಗ ನಿರೋಧಕ ಶಕ್ತಿಯ ಖನಿಜ ಮಿಶ್ರಣವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ವರ್ಷಕ್ಕೆ 2 ಬಾರಿ ಜಂತುಹುಳ ಔಷಧ, ಕಾಲುಬಾಯಿ ರೋಗ ಚಿಕಿತ್ಸೆ ಮಾಡಿಸಬೇಕು. ರಾಸುಗಳಿಗೆ ವಿಮಾ ಸೌಲಭ್ಯ ದೊರೆಯಲಿದೆ. ರಾಸುಗಳಿಗೆ ಕಾಯಿಲೆ ಬಂದಾಗ ನುರಿತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿದರೆ ಉತ್ತಮ ಎಂದರು.

ಸಂದ ಅಧ್ಯಕ್ಷ ವಿ. ಮುನಿರಾಜು (ರಾಜಣ್ಣ) ಮಾತನಾಡಿ, ಸಂವು 2024&25ನೇ ಸಾಲಿನಲ್ಲಿ 11.91 ಲಕ್ಷ ರೂ. ವ್ಯಾಪಾರ ಲಾಭದಲ್ಲಿ 5.74 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿ, ರೈತರಿಗೆ ಶೇ. 2.75 ಬೋನಸ್​ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಸಂಕ್ಕೆ ಹೆಚ್ಚು ಹಾಲು ಪೂರೈಸಿದ ಎನ್​.ಟಿ.ಶ್ರೀನಿವಾಸ್​, ಪ್ರಮೀಳಾ, ವಿ.ಮಂಜುನಾಥ್​ ಅವರನ್ನು ಶಾಲು ಹೊದಿಸಿ, ಹಾಲಿನ ಕ್ಯಾನ್​ ನೀಡಿ ಗೌರವಿಸಲಾಯಿತು. ಮಾರ್ಗ ವಿಸ್ತರಣಾಧಿಕಾರಿಗಳಾದ ಕೆ.ಆರ್​.ರಮೇಶ್​, ವಿನಯ್​ಕುಮಾರ್​, ರುನಾಥ್​, ಕೃಷಿ ಅಧಿಕಾರಿ ಸೌಮ್ಯಾ, ಎಂಪಿಸಿಎಸ್​ನ ಉಪಾಧ್ಯಕ್ಷ ವಿ.ಮಂಜುನಾಥ್​ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net