ಮಹಾಬೋಧಿ ಪತ್ತಿನ ಸಹಕಾರ ಸಂಘಕ್ಕೆ ರೂ.೭೬,೨೦೬ ಲಾಭ

SATHISH
Published on

ಮಡಿಕೇರಿ: ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ.೭೬,೨೦೬ ರಷ್ಟು ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘವು ಪ್ರಸ್ತುತ ೧೩೨೨ ಸದಸ್ಯರುಗಳನ್ನು ಹೊಂದಿದ್ದು, ಸದಸ್ಯರಿಂದ ರೂ.೧೧,೪೭,೩೦೦ ಲಕ್ಷ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸಂಘದ ದುಡಿಯುವ ಬಂಡವಾಳ ರೂ. ೧೬,೭೯,೧೦೦ ಆಗಿದ್ದು, ಸಂಘ ಪ್ರಸ್ತುತ ರೂ.೪,೭೦,೦೪೦ ರಷ್ಟು ವಿವಿಧ ಠೇವಣಿಗಳನ್ನು ಹೊಂದಿರುತ್ತದೆ. ಹಾಗೂ ಸಂಘವು ಸದಸ್ಯರುಗಳಿಗೆ ಜಾಮೀನು ಸಾಲವನ್ನು ನೀಡುತ್ತಿದ್ದು, ಇದುವರೆಗೆ ರೂ.೧೭,೦೮,೫೪೯ ಗಳಷ್ಟು ಸದಸ್ಯರಿಗೆ ಜಾಮೀನು ಸಾಲವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.


ಸಂಘದಲ್ಲಿರುವ ಠೇವಣಿಗಳಿಗೆ ಕನಿಷ್ಠ ಶೇ.೨ ರಿಂದ ಗರಿಷ್ಠ ಶೇ.೮ ರವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರೀಕರಿಗೆ ೮.೫ ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಗ್ರಾಹಕರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.


ಸಂಘದ ವ್ಯವಹಾರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಲಾಭದಲ್ಲಿದೆ. ಸಂಘದಲ್ಲಿ ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದೆ. ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರುಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗೂ ಸದಸ್ಯರುಗಳು ತೆಗೆದುಕೊಳ್ಳುವ ಸಾಲದ ಮೇಲೆ ಜೀವವಿಮೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net