41.96 ಲಕ್ಷ ರೂ ಲಾಭ, ಸದಸ್ಯರಿಗೆ ಶೇ.13 ಡಿವಿಡೆಂಟ್

byn (2)
Published on

ಬೈಂದೂರು: ಸಂಘದ ಗ್ರಾಹಕರಿಗೆ ಆರ್ಥಿಕ ಸೇವೆ ಒದಗಿಸುವುದು ಮತ್ತು ಎಲ್ಲ ರೀತಿಯ ಸೌಲಭ್ಯವನ್ನು ನೀಡಲು ಸಂಘವು ಬದ್ಧವಾಗಿದೆ. ಸಾರ್ವಜನಿಕರಿಗೆ ಅಗತ್ಯ ನೆರವು ನೀಡುವುದರ ಜೊತೆಗೆ ತನ್ನ ಸೇವಾ ಬದ್ಧತೆಯನ್ನು ಗಟ್ಟಿಗೊಳಿಸಿದೆ. ಸದಸ್ಯರ ಸಹಕಾರದಿಂದ ಪ್ರಸ್ತುತ ವರ್ಷ 134 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿ 41.96 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.13 ಡಿವಿಡೆಂಟ್ ನೀಡಲಾಗುವುದು ಎಂದು ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ ಹೇಳಿದರು.

ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ 8ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಿಸಿ, ಸಂಸ್ಥೆಯ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ತಿಳಿಸಿದರು.

ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಸಾಲ್ಯಾನ್, ಸಂಸ್ಥೆಯ ಉಪಾಧ್ಯಕ್ಷ ಯು.ಪ್ರಕಾಶ್ ಭಟ್, ನಿರ್ದೇಶಕರಾದ ಕೆ.ಗೋಪಾಲಕೃಷ್ಣ, ಭೀಮೇಶ್‌ಕುಮಾರ್ ಎಸ್.ಜಿ., ಬಾಲಕೃಷ್ಣ ಪ್ರಭು, ವೈ.ಸಿದ್ದೇಶ್, ಶ್ರೀಗಣೇಶ ಗಾಣಿಗ, ರಾಜೇಶ್ ಪೈ, ಮೋಹಿನಿ ಜಿ.ಶೆಟ್ಟಿ, ಗೌರಿ ಮಂಗೇಶ್, ಮಮತಾ ಕಿಣಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿವರ್ರ್ಹಣಾಧಿಕಾರಿ ಶ್ರೀನಿವಾಸ ಎಂ. ಸಂಸ್ಥೆಯ ವಾರ್ಷಿಕ ವರದಿ, ಆಯ-ವ್ಯಯ ಹಾಗೂ ಮುಂದಿನ ಸಾಲಿನ ಬಜೆಟ್ ಮಂಡಿಸಿದರು. ನಿರ್ದೇಶಕರಾದ ಅರುಣ್‌ಕುಮಾರ್ ಶಿರೂರು ನಿರೂಪಿಸಿದರು. ಶಿರೂರು ಪ್ರಸಾದ ಪ್ರಭು ವಂದಿಸಿದರು.

ಜಿಲ್ಲೆಯ 150 ಸೌಹಾರ್ದ ಸಹಕಾರಿಗಳಲ್ಲಿ ಕಾಮಾಕ್ಷಿ ಸೌಹಾರ್ದ ಸಹಕಾರಿಯು ಎಲ್ಲ ವಿಭಾಗಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಂಘದ ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಸಹಕಾರದಿಂದ ಸಂಸ್ಥೆಯು ಉತ್ತಮ ಪ್ರಗತಿ ಸಾಧಿಸಿದೆ. ಪ್ರಾರಂಭದಿಂದಲೂ ಲಾಭದಲ್ಲೇ ಮುನ್ನಡೆಯುತ್ತಿದ್ದು, ಕಳೆದ ಏಳು ವರ್ಷಗಳಿಂದಲೂ ನಿರಂತರ ಡಿವಿಡೆಂಡ್ ನೀಡಿರುವ ಹೆಗ್ಗಳಿಕೆ ಸಂಸ್ಥೆಯದ್ದಾಗಿದೆ. -ಅಂಪಾರು ಜಗನ್ನಾಥ ಶೆಟ್ಟಿ, ಅಧ್ಯಕ್ಷರು ಜಿಲ್ಲಾ ಸೌಹಾರ್ದ ಒಕ್ಕೂಟ. https://www.vijayavani.net/talent-award-at-amrutha-bharathi-vidyalaya https://www.vijayavani.net/selected-for-the-mysore-divisional-dasara-games

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net