

ಹಾವೇರಿ: ಐಐಎಫ್ಎಲ್ ವಿಐಪಿ ವೆಲ್ತ್ ಪಾರ್ಟನರ್ ಗ್ರುಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಬಹಳಷ್ಟು ಲಾಭ ಪಡೆಯಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 75.42 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರ ಗೌರಿಶಂಕರ ನಗರದ ರಾಕೇಶ ವಿಶ್ವನಾಥಸಾ ಇರಕಲ್ಲ (40) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ನೇಮ್ ಕುಮಾರ ಹಾಗೂ ಸ್ನೇಹಾ ಶಾರದಾ ಎಂಬುವರು ಫೋನ್ ಮಾಡಿ ಐಐಎಫ್ಎಲ್ ವಿಐಪಿ ವೆಲ್ತ್ ಪಾರ್ಟನರ್ ಗ್ರುಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಬಹಳಷ್ಟ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ನಂತರ ನಕಲಿ ಟ್ರೇಡಿಂಗ್ ಆಫ್ಗೆ 75.42 ಲಕ್ಷ ರೂ. ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.