ಲಾಭದತ್ತ ಬೆಲ್ಲದ ಬಾಗೇವಾಡಿ ಸೊಸೈಟಿ

10Huk1
Published on

ಹುಕ್ಕೇರಿ: ಸದಸ್ಯರು, ಗ್ರಾಹಕರು ಮತ್ತು ಠೇವಣಿದಾರರ ಸಹಕಾರ ಹಾಗೂ ಉತ್ತಮ ವ್ಯವಹಾರದಿಂದ ತಾಲೂಕಿನ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಸಕ್ತ ವರ್ಷ 2.75 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪವನ ಕತ್ತಿ ತಿಳಿಸಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ಬ್ಯಾಂಕಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕ್ 21 ಸಾವಿರ ಸದಸ್ಯರು, 491.59 ಕೋಟಿ ರೂ. ಠೇವಣಿ, 40.29 ಕೋಟಿ ರೂ. ಸ್ವಂತ ಬಂಡವಾಳ ಹೊಂದಿದೆ. 276.53 ಕೋಟಿ ರೂ. ಸಾಲ ವಿತರಿಸಿ ಸದಸ್ಯರಿಗೆ ಶೇ.15 ಲಾಭಾಂಶ ವಿತರಿಸಲಾಗಿದೆ. 7 ಜಿಲ್ಲೆಗಳಲ್ಲಿ 27 ಶಾಖೆಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ

5 ಶಾಖೆ ತೆರೆಯಲು ನಿಶ್ಚಯಿಸಲಾಗಿದೆ. ಈ ವರ್ಷ 5.91 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದರು.

ಸಂಜಯ ಇಂಚಲ ಮಾತನಾಡಿ, ವೈಯಕ್ತಿಕ ಮತ್ತು ಸಾಲದ ಬಾಬತ್ತು, ವಿಮೆ ಯೋಜನೆಯಿಂದ ಆಗುವ ಲಾಭ ವಿವರಿಸಿದರು. ಬ್ಯಾಂಕಿನ ಆಡಳಿತ ಸಲಹೆಗಾರ ಎಂ.ಕೆ.ಅಮ್ಮಣಗಿ ವಾರ್ಷಿಕ ವರದಿ ಓದಿದರು.

ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಎಂ.ಎಸ್.ಬೆಲ್ಲದ, ಎಂ.ಪಿ.ಖೇಮಲಾಪುರೆ, ಎಸ್.ವಿ.ಹಾಗರಗಿ, ಸುರೇಶ ಬೆಲ್ಲದ, ಮುರುಗೇಶ ಕತ್ತಿ, ಎಸ್.ಡಿ.ಪಠಾಣ, ಕಿಶೋರ ಕತ್ತಿ, ಎಂ.ಎಸ್.ಶ್ರೀಖಂಡೆ, ವಿ.ಎಸ್.ಶೆಟ್ಟಿ, ಎಸ್.ಎಸ್.ತೇರದಾಳ, ಮುಖಂಡರಾದ ಪೃಥ್ವಿ ಕತ್ತಿ, ಸಂದೀಪ ಕತ್ತಿ, ಅಶೋಕ ಬೆಲ್ಲದ, ಶ್ರೀಕಾಂತ ಖೇಮಲಾಪುರೆ, ಅಪ್ಪಾಸಾಹೇಬ ಖೇಮಲಾಪುರೆ, ಆರ್.ಟಿ.ಶಿರಾಳಕರ ಇತರರಿದ್ದರು. ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ ನಿರೂಪಿಸಿದರು. ನಿರ್ದೇಶಕ ವಿನಾಯಕ ಬುರ್ಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net