ಪ್ರಾಧ್ಯಾಪಕರು ಸಂಶೋಧನೆಯತ್ತ ನಿರ್ಲಕ್ಷ್ಯ: ಸಿದ್ದಗಂಗಾ ಶ್ರೀಗಳ ಅಸಮಾಧಾನ

kasana
Published on

ಬೆಂಗಳೂರು: ಪ್ರಾಧ್ಯಾಪಕರಿಗೆ ಬೋಧನೆ ಮತ್ತು ಸಂಶೋಧನೆ ಜೀವನದ ಭಾಗವಾಗಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಾಧ್ಯಾಪಕರು ಸಂಶೋಧನೆಯತ್ತ ಗಮನಹರಿಸದಿರುವುದು ದುರದೃಷ್ಟ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಸುಮಾ ಪ್ರಕಾಶನ ಹಾಗೂ ಜ್ಞಾನ ಸಂಬುದ್ಧ ಪ್ರಕಾಶನ ಸಹಯೋಗದಲ್ಲಿ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಎಸ್. ದೇವಿಕಾ ಅವರ ರಚನೆಯ ‘ವೀರಶೈವ ಶತಕ ಸಾಹಿತ್ಯ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಯುಜಿಸಿ ನಿಯಮಗಳು ಕೂಡ ಸಂಶೋಧನೆ ಬಗ್ಗೆ ತಿಳಿಸುತ್ತದೆ. ಆದರೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕುಸಿಯುತ್ತಿದೆ. ಆದರೆ, ಡಾ. ದೇವಿಕಾ ಅವರು ಸಂಶೋಧನೆ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ವಚನ ಸಾಹಿತ್ಯದಂತೆ ಶತಕ ಸಾಹಿತ್ಯವೂ ಮುಖ್ಯ:

ವಚನ ಸಾಹಿತ್ಯದಂತೆ ಶರಣ ಸಾಹಿತ್ಯ ಕೂಡ ಪ್ರಮೂಖವಾದುದ್ದಾಗಿದೆ. 40 ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಕೃತಿ ರಚನೆ ಮಾಡಿದ್ದಾರೆ. ಹರಿಹರನ ಶತಕ ಒಳಗೊಂಡಂತೆ ಇತರೆ ಶತಕಗಳೂ ಇವೆ ಎಂದು ಹೇಳಿದರು.

ಇದೇ ವೇಳೆ ಡಾ. ದೇವಿಕಾ ಅವರ ತಂದೆ ಡಾ. ಎಸ್.ಆರ್. ಸದಾಶಿವಯ್ಯ ಅವರ 73ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಸದಾಶಿವಯ್ಯ ಮತ್ತು ಶೈಲಜಾ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿ. ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ, ಅಧ್ಯಾತ್ನ ಚಿಂತಕ ಜಂಬುನಾಥ ಮಳಿಮಠ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಆಯುರ್ವೇದ ತಜ್ಞ ಡಾ. ಬಿ. ನಂಜುಂಢಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.

ಶತಕ ಸಾಹಿತ್ಯ ಕೂಡ ಇತರೆ ಸಾಹಿತ್ಯಗಳಂತೆ ಪ್ರಮುಖ ಸಾಹಿತ್ಯವಾಗಿದೆ. ಡಾ. ದೇವಿಕಾ ಅವರು ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಂಶೋಧನಾ ಚಟುವಟಿಕೆಗಳಲ್ಲಿ ಮುಂದುವರಿಯಲಿ. - ಶೈಲಜಾ, ವಿ. ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net