ಪ್ರಾಧ್ಯಾಪಕ ಶೆಟ್ಟರ್ ಲೇಖನಗಳು ಪಠ್ಯಕ್ಕೆ ಆಯ್ಕೆ

ಪ್ರೊ.ಮಂಜುನಾಥ ಶೆಟ್ಟರ್
ಪ್ರೊ.ಮಂಜುನಾಥ ಶೆಟ್ಟರ್
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಉಲವತ್ತಿ ಗ್ರಾಮದವರು ಹಾಗೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಶೆಟ್ಟರ್ ಅವರ ಲೇಖನಗಳು ರಾಯಚೂರು ಮತ್ತು ಶಿವಮೊಗ್ಗ ವಿವಿಗಳ ಪಠ್ಯಕ್ಕೆ ಆಯ್ಕೆಯಾಗಿವೆ.

ರಾಯಚೂರು ವಿವಿಯ ಬಿಎಸ್ಸಿ ಹಾಗೂ ಬಿಸಿಎ ವಿಭಾಗದ ಕನ್ನಡ ಪಠ್ಯಕ್ಕೆ ‘ಜೀವ ಜಲದ ಬೇಡಿಕೆ ಮತ್ತು ಅದರ ಕಲುಷಿತ ಪೂರೈಕೆ’ ಲೇಖನ ಹಾಗೂ ಶಿವಮೊಗ್ಗದ ಕುವೆಂಪು ವಿವಿಯ ಬಿಸಿಎ ವಿಭಾಗದ ಕನ್ನಡ ಪಠ್ಯಕ್ಕೆ ‘ಉತ್ತರ ಕರ್ನಾಟಕದ ಪರಿಹಾರವಾಗದ ಸಮಸ್ಯೆಗಳು’ ಎಂಬ ಲೇಖನ 2023-26ರ ಅವಧಿಗೆ ಸೇರ್ಪಡೆಯಾಗಿವೆ. ಪ್ರಾಧ್ಯಾಪಕ ಶೆಟ್ಟರ್ ಅವರ 200ಕ್ಕೂ ಹೆಚ್ಚಿನ ಲೇಖನಗಳು ರಾಜ್ಯಮಟ್ಟದ ವಿವಿಧ ಮಾಸ ಪತ್ರಿಕೆ, ದಿನಪತ್ರಿಕೆಗಳ ಸಂಪಾದಕೀಯ ಪುಟಗಳಲ್ಲಿ ಪ್ರಕಟವಾಗಿವೆ. ಆರು ಪುಸ್ತಕಗಳು ಬಿಡುಗಡೆಯಾಗಿವೆ. ಕೋವಿಡ್ ಸಮಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುದ್ರಣಗೊಂಡ ಸಾಂಕ್ರಾಮಿಕ ರೋಗ ಕುರಿತ ಂಟಿಣ ಜಿ ಟಛಿಚಿಟ ಡಿ ತಿಚಿಡಿ ಎಂಬ ಪುಸ್ತಕ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net