

ಉಡುಪಿ: ಇಂದಿನ ಯಾಂತ್ರೀಕೃತ ಜೀವನ ಶೈಲಿಯಂದಾಗಿ ದೈಹಿಕ ಚಟುವಟಿಕೆಯಿಂದ ಎಲ್ಲರೂ ವಿಮುಖರಾಗುತ್ತಿದ್ದು, ಹಲವು ಒತ್ತಡಗಳ ನಡುವೆ ಜೀವಿಸುವಂತಾಗಿದೆ. ಹೀಗಾಗಿ ಯೋಗ&ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಚೇತೋಹಾರಿ ಜೀವನ ನಡೆಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಉಡುಪಿ ಬಾರ್ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ "ಪ್ರೊೆಷನಲ್ ಟ್ರೋಫಿ' ಉದ್ಘಾಟಿಸಿ ಮಾತನಾಡಿದರು. ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಕೀಲರು, ವೈದ್ಯರು, ಸಿಎಗಳು ಹಾಗೂ ಇಂಜಿನಿಯರ್ಗಳು ಸದಾ ಒತ್ತಡದಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಈ ರೀತಿ ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಸ್ವಲ್ಪಮಟ್ಟಿನ ನೆಮ್ಮದಿ ಲಭಿಸುತ್ತದೆ ಎಂದರು.
ನಗರಸಭಾ ಪೌರಾಯುಕ್ತ ರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸೀಮಿತ ಆರು ಓವರ್ನ ಈ ಪಂದ್ಯಾವಳಿಯಲ್ಲಿ ಎಡ್ವೊಕೇಟ್ಸ್ ಇಲೆವೆನ್, ಇಂಜಿನಿಯರ್ಸ್ ಇಲೆವೆನ್, ಡಾಕ್ಟರ್ಸ್ ಇಲೆವೆನ್ ಹಾಗೂ ಸಿಎ ಇಲೆವೆನ್ ತಂಡಗಳು ಭಾಗವಹಿಸಿದ್ದವು. ಉಡುಪಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಿನೇಶ್ ಹೆಗ್ಡೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಘ್ನೇಶ್ಕುಮಾರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸೋಮನಾಥ್, 1ನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಧೀಶ ಶ್ಯಾಮ್ಪ್ರಕಾಶ್, 3ನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಧೀಶ ವಿನಾಯಕ್ ವಿ., 4ನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಧೀಶ ಜೀತು, ಸಂದ ಕ್ರೀಡಾ ಕಾರ್ಯದರ್ಶಿ ಸುಮಿತ್ ಹೆಗ್ಡೆ ಹಾಗೂ ವಕೀಲರು ಉಪಸ್ಥಿತರಿದ್ದರು. ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ರೆನಾಲ್ಡ್ ಪ್ರವಿಣ್ಕುಮಾರ್ ಸ್ವಾಗತಿಸಿದರು. ಸಂದ ಜನರಲ್ ಸೆಕ್ರೆಟರಿ ರಾಜೇಶ್ ಎ.ಆರ್. ವಂದಿಸಿದರು. ವಿಜಯ್ ಎಂ. ಕಾರ್ಯಕ್ರಮ ನಿರೂಪಿಸಿದರು.