ವೃತ್ತಿಪಾವಿತ್ರ್ಯ ಕಾಪಾಡಿಕೊಳ್ಳಬೇಕು

3
ಹಾರೂಗೇರಿ ರೂಪ ಫೋಟೋ ಸ್ಟುಡಿಯೋ ಆವರಣದಲ್ಲಿ ರಾಯಬಾಗ ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಜರುಗಿತು. ಮಲ್ಲಿಕಾರ್ಜುನ ಕೆ.ಆರ್., ಹನುಮಂತ ಕುರಿ, ಶಿವಯ್ಯ ಮಠಪತಿ, ಸುಭಾಷ ನಾಯಿಕ ಇತರರಿದ್ದರು.
Published on

ಹಾರೂಗೇರಿ: ಛಾಯಾಗ್ರಾಹಕರ ಹಲವಾರು ವರ್ಷಗಳ ಬೇಡಿಕೆ ಪರಿಗಣಿಸಿ ರಾಜ್ಯ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆಗೆ ಸೇರಿಸುವ ಆದೇಶ ಮಾಡಿರುವುದು ಶ್ಲಾಘನೀಯ. ಛಾಯಾಗ್ರಹಕರು ವೃತ್ತಿಪಾವಿತ್ರ್ಯ ಕಾಪಾಡಿಕೊಳ್ಳಬೇಕು ಎಂದು ಛಾಯಾಗ್ರಾಹಕರ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್. ಹೇಳಿದರು.

ಪಟ್ಟಣದ ರೂಪ ಫೋಟೋ ಸ್ಟುಡಿಯೋ ಆವರಣದಲ್ಲಿ ರಾಯಬಾಗ ತಾಲೂಕು ಛಾಯಾಗ್ರಾಹಕರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು

.ರಾಯಬಾಗ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಹನುಮಂತ ಕುರಿ ಮಾತನಾಡಿ, ಛಾಯಾಗ್ರಾಹಕರು ಒಗ್ಗಟ್ಟಿನಿಂದ ಸಂಘಟಿತರಾದರೆ ಸಂಘಕ್ಕೆ ಹೆಚ್ಚು ಬಲ ಬರುತ್ತದೆ ಎಂದರು.

ಉಪಾಧ್ಯಕ್ಷರಾಗಿ ಶಿವಯ್ಯ ಮಠಪತಿ, ಕಾರ್ಯದರ್ಶಿ ಸುಭಾಷ ನಾಯಿಕ, ಸಹ ಕಾರ್ಯದರ್ಶಿ ಯಲ್ಲಪ್ಪ ಕಣಗಲಿ, ಖಜಾಂಚಿ ಜ್ಯೋತಿಬಾ ದುಮಾಳೆ ಆಯ್ಕೆಯಾದರು. ಲಕ್ಷ್ಮಣ ಯಮಕಣಮರಡಿ, ಸುರೇಶ ರಾಜಪುತ, ಹನುಮಂತ ಸಣ್ಣಕ್ಕಿನವರ, ರವಿ ದೊಂಗಡೆ, ಸಿದ್ದು ಕ್ಷಿರಸಾಗರ, ಸಿದ್ದು ಸವದಿ, ಮಾರುತಿ ಕೊಡ್ಲಿ, ನೇಮಣ್ಣ ಲಾಳಿ, ಸತಿಗೌಡ ಪಾಟೀಲ, ಬಸವರಾಜ ಶಿರೋಳ, ಪ್ರಕಾಶ ತೇರದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net