

ಕಡೂರು: ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಜ್ಞಾನಕ್ಕಿಂತ ವೃತ್ತಿಯ ಅನುಭವ ಮುಖ್ಯ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಗ್ರೇಡ್-2 ತಹಸೀಲ್ದಾರ್ ಎನ್.ಆರ್.ಮಂಜುನಾಥ್ ಸ್ವಾಮಿ ಮತ್ತು ಚುನಾವಣಾ ಶಿರಸ್ತೇದಾರ್ ಎನ್.ಕೆ. ನಾಗರಾಜ್ ನಿವೃತ್ತರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಇಬ್ಬರು ಸಹ ಅನುಭವ ಉಳ್ಳವರಾಗಿದ್ದು ಇಲಾಖೆಯಲ್ಲ ಯಾವುದೇ ಜಟಿಲ ಸಮಸ್ಯೆಗಳು ಬಂದರು ಲೀಲಾಜಾಲವಾಗಿ ಸಮಸ್ಯೆ ಬಗೆಹರಿಸಿ ಸಾರ್ವಜನಿಕ ಸೇವೆ ಮಾಡಿ ವೃತ್ತಿಯಿಂದ ನಿವೃತ್ತಿಗೊಂಡಿದ್ದಾರೆ.
ಇಬ್ಬರೂ ತಾಲೂಕು ಕಚೇರಿಯ ಎರಡು ಕಣ್ಣುಗಳಾಗಿದ್ದರು.ಕಂದಾಯ ಇಲಾಖೆ ಸಮಗ್ರ ಇತಿಹಾಸ ಬಲ್ಲವರಾಗಿದ್ದರು ಅದರಲ್ಲಿಯೂ ಮಂಜುನಾಥ್ ಸ್ವಾಮಿ ಅವರು ಕೈ ಬರಹದ ಕಾಲದಿಂದಲೂ ಕಂಪ್ಯೂಟರ್ ಡಿಜಿಟಲ್ವರೆಗೂ ಅನುಭವ ಹೊಂದಿದ್ದರು. ಎಂದರು.
ಸನ್ಮಾನ ಸ್ವೀಕರಿಸಿದ ಗ್ರೇಡ್ 2 ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಮಾತನಾಡಿ,ಕಂದಾಯ ಇಲಾಖೆ ಒಂದು ಅನುಭವ ಮಂಟಪ. ಇಲ್ಲಿ ಎಷ್ಟು ಕಲಿತರು ಸಾಲದು. ಇಲಾಖೆಯಲ್ಲಿ ಇತ್ತೀಚೆಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ನೌಕರರು ಒತ್ತಡಕ್ಕೆ ಒಳಗಾಗದೆ ಸಮಸ್ಯೆಗಳನ್ನು ಅರಿತು ಕೆಲಸ ನಿರ್ವಹಿಸಬೇಕು ಎಂದರು.
ಹಟ್ಟಿ ಗೋಲ್ಡ್ ಕಂಪನಿಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್, ಶಿರಸ್ತೇದಾರ್ ನಾಗರತ್ನ, ಹನುಮಂತಪ್ಪ, ಸುರೇಶ್, ಗಿರೀಶ್, ಕಂದಾಯ ನಿರೀಕ್ಷಕರಾದ ಪಿ.ಆರ್.ರವಿಕುಮಾರ್, ಶ್ರೀೀನಿವಾಸ್, ಜಿತೇಂದ್ರ ಸಿಂಗ್‌ನಾಯಕ್, ಆರ್.ರವಿಕುಮಾರ್, ನಾಗರಾಜ್, ತಿಪ್ಪೇಶಪ್ಪ, ಮತ್ತು ಗಿರೀಶ್, ಬಿ.ರವಿ, ಆಡಳಿತಾಧಿಕಾರಿ ಸಂಘದ ಅಧ್ಯಕ್ಷ ರವೀಂದ್ರ, ಲಿಂಗರಾಜ್ ಹಾಗೂ ಜ್ಯೋತಿ ಮಂಜುನಾಥಸ್ವಾಮಿ, ಬಿಇಒ ಆರ್. ಸಿದ್ದರಾಜುನಾಯ್ಕ್ ಮತ್ತಿತರಿದ್ದರು.