ವೃತ್ತಿಪರ ಕೋರ್ಸ್​ ಜ್ಞಾನ ಅಗತ್ಯ

17MUDALGI1
Published on

ಮೂಡಲಗಿ: ಪದವಿ ವಿದ್ಯಾರ್ಥಿಗಳಿಗೆ ಶೈಣಿಕ ಮತ್ತು ವೃತ್ತಿಪರ ಕೋರ್ಸ್​ಗಳ ಜ್ಞಾನ ಅಗತ್ಯ. ಬಿಎಸ್ಸಿ ಪದವೀಧರರು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಭಾರ ಮುಖ್ಯಶಿಕ್ಷಕ ಡಾ.ಶಿವಲಿಂಗ ಅರಗಿ ಹೇಳಿದರು. ಪಟ್ಟಣದ ಆರ್​ಡಿಎಸ್​ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಎಸ್ಸಿ ಪದವಿ ನಂತರ ಭವಿಷ್ಯತ್ತಿನ ಅವಕಾಶಗಳು ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣಕ್ಕೆ ವಿಪುಲ ಅವಕಾಶಗಳಿವೆ. ಹೀಗಾಗಿ, ವಿದ್ಯಾರ್ಥಿಗಳು ಅಗತ್ಯ ಸಿದ್ಧತೆ ಹಾಗೂ ಮಾರ್ಗದರ್ಶನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಪ್ರೊ.ಸ್ಫೂರ್ತಿ ಈಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕ ಎಷ್ಟು ಮುಖ್ಯವೋ, ಭವಿಷ್ಯದ ಯೋಜನೆ ಬಹುಮುಖ್ಯವಾಗಿದೆ ಎಂದು ತಿಳಿಸಿದರು. ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿದರು. ಪ್ರೊ.ಸುನೀಲ ಸತ್ತಿ, ರಾಜು ಪತ್ತಾರ, ಸಾಧನಾ ಖಂಡ್ರಟ್ಟಿ, ಪ್ರಸ್ಕೀಲಾ ಗಸ್ತಿ, ಸವಿತಾ ವೆಂಕಟಾಪುರ ಇತರರಿದ್ದರು. ವಿದ್ಯಾರ್ಥಿ ವರುಣ ಪಾಟೀಲ ನಿರೂಪಿಸಿದರು. ಮುರಾರಿ ನಿಡೋಣಿ ಸ್ವಾಗತಿಸಿದರು, ಜ್ಯೋತಿ ಗರಗದ ಪರಿಚಯಸಿದರು. ಸುಶ್ಮಿತಾ ತುಪ್ಪದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net