

ಅಥಣಿ: ವಿಮಾ ಪ್ರತಿನಿಧಿಗಳು ವೃತ್ತಿ ಗೌರವ ಕಾಪಾಡಿಕೊಳ್ಳಬೇಕು ಎಂದು ಜೀವವಿಮಾ ನಿಗಮದ ಶಾಖಾ ವ್ಯವಸ್ಥಾಪಕ ವಾದಿರಾಜ ಕುಲಕರ್ಣಿ ಹೇಳಿದರು.
ಪಟ್ಟಣದ ಜೀವ ವಿಮಾ ನಿಗಮದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಮಾ ಸಪ್ತಾಹ ಹಾಗೂ ಪ್ರತಿನಿಧಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಪಟ್ಟಣಶೆಟ್ಟಿ, ನಾಗರಾಜ ದಾಸರ, ಸಾಗರ ಗುಜ್ಜರ, ನಾರಾಯಣ ದೇವಮಾನೆ, ಹಿರಿಯ ಪ್ರತಿನಿಧಿಗಳಾದ ಪ್ರಭಾಕರ ಚವ್ಹಾಣ, ಸುನೀಲ ಮೇತ್ರಿ, ರಾಜು ವಾಘಮೋರೆ, ವಿಮಾ ಪ್ರತಿನಿಧಿ ಸಂಘದ ಅಧ್ಯಕ್ಷ ಚಂದು ಪಾಟೀಲ, ಸುನೀಲ ಪವಾರ, ರಾಹುಲ ಹೊಮಕರ, ಶ್ರೀಶೈಲ ಚೌಗಲಾ, ಧರೆಪ್ಪ ಸಿಂಧೂರ, ಅನಿಲ ಪಾಟೀಲ, ಆರತಿ ಅವಟಿಮಠ, ಗೀತಾ ಕಮತೆ ಇತರರು ಇದ್ದರು.