

ಶಿಗ್ಗಾಂವಿ: ಶೈಕ್ಷಣಿಕ, ಸಾಮಾಜಿಕ ಹಾಗೂ ಕಲಾ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುವ ಮೂಲಕ ಅಪಾರ ಶಿಷ್ಯ ಸಮೂಹ ಸಂಪಾದಿಸಿದ ಪ್ರೊ.ಶ್ರೀಶೈಲ ಹುದ್ದಾರ ವ್ಯಕ್ತಿತ್ವ ಅನುಕರಣೀಯ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.
ಸಹ ಪ್ರಾಧ್ಯಾಪಕ ಹುದ್ದೆಯಿಂದ ಸೇವಾ ನಿವೃತ್ತಿ ಹೊಂದಿದ ಶ್ರೀಶೈಲ ಹುದ್ದಾರ ಅವರಿಗೆ ಪಟ್ಟಣದ ಶ್ರೀ ಹನುಮಂತಗೌಡ್ರ ಪಾಟೀಲ ಕಲ್ಯಾಣ ಭವನದಲ್ಲಿ ಶ್ರೀಶೈಲ ಹುದ್ದಾರ ಅಭಿನಂದನ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಶರಣು ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾವೈಕ್ಯ ಭಾವದ ವಕ್ತಾರ ಪ್ರೊ.ಶ್ರೀಶೈಲ ಹುದ್ದಾರ ಕಿರುಚಿತ್ರ ಪ್ರದರ್ಶನಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಚಾಲನೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಹುದ್ದಾರರು ಬೋಧನೆಯ ವೃತ್ತಿಯಲ್ಲಿದ್ದರೂ ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜಹರ್ಷ ಸೊಲಬಕ್ಕನವರ, ಮಲ್ಲಿಕಾರ್ಜುನ ಕರಡಿ, ಬಸನಗೌಡ ಪಾಟೀಲ, ರಾಘವೇಂದ್ರ ದೇಶಪಾಂಡೆ, ಸಾಂಬಯ್ಯ ಹಿರೇಮಠ, ರವಿ ಅರಗೋಳ, ಚಂದ್ರು ಬಡಿಗೇರ, ಸುಮಾ ಹುದ್ದಾರ ಅನಿಸಿಕೆ ವ್ಯಕ್ತಪಡಿಸಿದರು.
ಸುಮಿತ್ರಾ ಹುದ್ದಾರ, ಶಿವಾನಂದ ಬಾಗೂರ, ಗುರು ಅಂಗಡಿ, ರಾಜು ಕೆಂಭಾವಿ, ಜಿಶಾನಅಹ್ಮದಖಾನ್ ಪಠಾಣ, ಮಂಜುನಾಥ ಬ್ಯಾಹಟ್ಟಿ, ಬಸವರಾಜ ಶಿಗ್ಗಾಂವಿ, ಎಚ್.ವೈ. ಬೆಂಗೇರಿ, ಇತರರು ಉಪಸ್ಥಿತರಿದ್ದರು. ಜನಪದ ಕಲಾವಿದರಿಂದ ಜಾನಪದ ಸಂಭ್ರಮ ಜರುಗಿತು. ಮಂಜುನಾಥ ಪ್ರಸಾದ ದುಬೆ, ಗೂಳಪ್ಪ ಅರಳಿಕಟ್ಟಿ ಹಾಗೂ ವೀರೇಂದ್ರ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿದರು.
ನಾಲ್ಕು ಗೋಡೆಗಳ ಮಧ್ಯೆ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದು ಅಷ್ಟೇ ಅಲ್ಲದೆ, ಸಾಮಾಜಿಕ ಕಾಳಜಿ ಹೊಂದಿದ್ದ ಪ್ರೊ. ಶ್ರೀಶೈಲ ಹುದ್ದಾರ ಶಿಗ್ಗಾಂವಿ ತಾಲೂಕಿನಲ್ಲಿ ಅವರ ಹೆಸರು ಅಚ್ಚೊತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಕಲಾ ಲೋಕಕ್ಕೆ ಅವರು ನೀಡಿದ ಕೊಡುಗೆ ಗಣನೀಯ. | ಸಂಗನಬಸವ ಮಹಾಸ್ವಾಮೀಜಿ, ವಿರಕ್ತಮಠ, ಶಿಗ್ಗಾಂವಿ ಉಪನ್ಯಾಸಕ ವೃತ್ತಿಯಲ್ಲಿರದೇ ಸಾಮಾಜಿಕ ಕಳಕಳಿ ಹೊಂದಿದ ಸ್ವಭಾವಕ್ಕೆ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಜನಸಮೂಹದ ಪ್ರೀತಿಯ ಅಪ್ಪುಗೆ ಸಿಕ್ಕಿದೆ. ಈ ನೆಲದ ಜನತೆ ನನಗೆ ತೋರಿದ ಅಭಿಮಾನವನ್ನು ನಾನೆಂದು ಮರೆಯಲಾರೆ. ನಾನು ಈ ನೆಲದ ಘನತೆಗೆ ತಲೆಬಾಗುವೆ. ಪ್ರೊ. ಶ್ರೀಶೈಲ ಹುದ್ದಾರ, ನಿವೃತ್ತ ಸಹ ಪ್ರಾಧ್ಯಾಪಕ