

ಧಾರವಾಡ: ಜೀವನದಲ್ಲಿ ಸಾಧನೆ ಮಾಡಲು ಶ್ರದ್ಧೆ ಹಾಗೂ ಬದ್ಧತೆ ಮುಖ್ಯ. ಸಾಧನೆಗಳ ಮೂಲಕ ಜೀವನದಲ್ಲಿ ಹೆಸರು ಉಳಿಯುವ ಕಾರ್ಯ ಮಾಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಟಿ. ನಂದಿಬೇವೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎಸ್.ಪಿ. ಹಿರೇಮಠ ದತ್ತಿ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ `ಪ್ರೊ. ಎಸ್.ಪಿ. ಹಿರೇಮಠ ಯುವ ವಿಜ್ಞಾನಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಇಂದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಪರಿಸರದ ಪ್ರತಿಯೊಂದು ಸನ್ನಿವೇಶದಲ್ಲಿ ವಿಜ್ಞಾನವಿದೆ. ಅದನ್ನು ಸತ್ಯದ ಮೂಲಕ ಸಂಶೋಽಸಬೇಕು. ಸತ್ಯದ ಅನ್ವೇಷಣೆಯೇ ವಿಜ್ಞಾನ. ವಿಜ್ಞಾನ ಹಾಗೂ ತಂತ್ರಜ್ಞಾನಗಳು ಒಂದಕ್ಕೊ೦ದು ಸಂಬ೦ಧ ಹೊಂದಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಉಪಾಧ್ಯಕ್ಷ ಡಾ. ಆನಂದ ಪಾಂಡುರ೦ಗಿ ಮಾತನಾಡಿ, ಈ ಪ್ರಶಸ್ತಿಯು ಯುವ ವಿಜ್ಞಾನಿಗಳ ಭವಿಷ್ಯದ ಬದುಕಿನ ಮೊದಲ ಯಶಸ್ಸಿನ ಹೆಜ್ಜೆಯಾಗಿದೆ. ಅಶ್ವಿನಿ ಗುಳೆಮ್ಮನವರ ಭವಿಷ್ಯದಲ್ಲಿ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ, ಸಂಶೋಧಕರಾಗಿ ವೃತ್ತಿ ಜೀವನದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.
ದತ್ತಿ ದಾನಿ ಡಾ. ಉಜ್ವಲಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಯಯದ ಅಶ್ವಿನಿ ಗುಳೆಮ್ಮನವರ ಅವರಿಗೆ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ, ಶಂಕರ ಹಲಗತ್ತಿ, ಸಿ.ಆರ್. ಯರವಿನತೆಲಿಮಠ, ವಿ.ವಿ. ಕಲ್ಲೂರ, ರವಿ ಗದ್ಗಿಮಠ, ಡಾ. ಮಲ್ಲಿಕಾರ್ಜುನ ಪಾಟೀಲ, ನಟರಾಜ ಮೂರಶಿಳ್ಳಿ, ಸುನಿತಾ ಮೂರುಶಿಳ್ಳಿ, ಅರುಣಾ ನಂದಿಬೇವೂರ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಇತರರಿದ್ದರು.