ಪ್ರೊ.ಮಹದೇವಮೂರ್ತಿ ಮೈವಿವಿ ಸಂಜೆ ಕಾಲೇಜಿನ ನೂತನ ಪ್ರಾಂಶುಪಾಲರು

mysore
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ಪ್ರೊ.ಎಸ್.ಮಹದೇವಮೂರ್ತಿ ಅಧಿಕಾರ ವಹಿಸಿಕೊಂಡರು. ಇವರು ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಆಗಿದ್ದರು.


ಸಂಜೆ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ಪ್ರೊ.ಎಚ್.ಸೋಮಶೇಖರಪ್ಪ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಪ್ರಾಧ್ಯಾಪಕ ಪ್ರೊ.ರಾಜೇಶ್, ಸಂಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನಿಂಗರಾಜು, ಡಾ.ವಾಸು, ಡಾ.ಕೆ.ಸೌಭಾಗ್ಯವತಿ, ಡಾ.ದಿವಾಕರ್ ಚಾಂಡಿ, ಡಾ.ಭಾಗ್ಯಶ್ರೀ, ಡಾ. ಅರುಣಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net