ಪ್ರೊ.ಕೆ.ಪಿ.ಶಿವರಾಯ ದಂಪತಿಗೆ ಸನ್ಮಾನ

24Ravig5web
ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮಸ್ಥರು ಪ್ರೊ.ಕೆ.ಪಿ.ಶಿವರಾಯ ನಿವೃತ್ತರಾಗಿದ್ದರಿಂದ ಭಾನುವಾರ ಕೆ.ಪಿ.ಶಿವರಾಯಿ ದಂಪತಿಯನ್ನು ಸನ್ಮಾನಿಸಿದರು. ಮಹಾದೇವ ಕೊರಬು, ಹಿರಿಯ ಸಾಹಿತಿ ಶಿವಾನಂದ ಬೆಳಕೂಡ, ಆರ್.ಟಿ.ಮಾಳಿ, ಡಾ.ಕೆ.ಎನ್.ದೊಡ್ಡಮನಿ, ಧರಮಟ್ಟಿ, ರುದ್ರಗೌಡ ಪಾಟೀಲ, ಕಲ್ಲಗೌಡ ಪಾಟೀಲ, ರಾಜಗೌಡ ಪಾಟೀಲ, ಶಂಕರಗೌಡ ಪಾಟೀಲ, ಅಣ್ಣಾಸಾಹೇಬ ಕೊರಬು ಇದ್ದರು.
Published on

ಬೆಳಗಾವಿ: ಇಲ್ಲಿನ ಆದರ್ಶ ಪದವಿಪೂರ್ವ ಕಾಲೇಜು ಸೇರಿ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದ ಪ್ರೊ.ಕೆ.ಪಿ.ಶಿವರಾಯ ನಿವೃತ್ತರಾದ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮಸ್ಥರು ಶಿವರಾಯಿ ದಂಪತಿಯನ್ನು ಭಾನುವಾರ ಸನ್ಮಾನಿಸಿದರು.

ಅಭಿನಂದನಾ ಸಮಾರಂಭದಲ್ಲಿ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಸ್ನೇಹ ಬಳಗ ಹಾಗೂ ಪರಿಶಿಷ್ಟ ಸಮುದಾಯದವರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆ.ಪಿ. ಶಿವರಾಯಿ ಹಾಗೂ ಅವರ ಧರ್ಮಪತ್ನಿ ಸವಿತಾ ಶಿವರಾಯಿ ಅವರನ್ನು ಸನ್ಮಾನಿಸಿದರು. ಸಿಪಿಐ ಹುದ್ದೆಯಿಂದ ಹುಬ್ಬಳ್ಳಿಯ ಲೋಕಾಯುಕ್ತ ಎಸಿಪಿ ಹುದ್ದೆಗೆ ಪದೋನ್ನತಿ ಹೊಂದಿದ ಬಾಬಾಸಾಹೇಬ ಹುಲ್ಲನ್ನವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಪ್ರೊ.ಸುರೇಶ ಹುಲ್ಲನ್ನವರ ಅವರನ್ನು ಸತ್ಕರಿಸಲಾಯಿತು.

ನಿವೃತ್ತ ಶಿಕ್ಷಕರಾದ ಮಹಾದೇವ ಕೊರಬು, ಹಿರಿಯ ಸಾಹಿತಿ ಶಿವಾನಂದ ಬೆಳಕೂಡ, ಆರ್.ಟಿ.ಮಾಳಿ, ಡಾ.ಕೆ.ಎನ್.ದೊಡ್ಡಮನಿ, ಧರಮಟ್ಟಿ, ರುದ್ರಗೌಡ ಪಾಟೀಲ, ಕಲ್ಲಗೌಡ ಪಾಟೀಲ, ರಾಜಗೌಡ ಪಾಟೀಲ, ಶಂಕರಗೌಡ ಪಾಟೀಲ, ಅಣ್ಣಾಸಾಹೇಬ ಕೊರಬು, ಶ್ರೀಕಾಂತ ಬಾಗನೆ, ದಗಡು ಸುಂಠೆ, ಪುಂಡಲೀಕ ಶಾಹಾಪುರೆ, ಧನಪಾಲ ಶಿವರಾಯಿ, ಅಶೋಕ ಶಿವರಾಯಿ, ಕಲ್ಲಪ್ಪ ಶಿವರಾಯಿ, ರವಿ ಕುರಣೆ ಇದ್ದರು. ಪ್ರೊ.ಎ.ಕೆ.ದೇಶಿಂಗೆ ಸ್ವಾಗತಿಸಿದರು. ಶಿಕ್ಷಕ ದತ್ತ ಸುಂಠೆ ನಿರೂಪಿಸಿದರು. ಎ.ಬಿ. ಕೊರಬು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net