ಪ್ರೊ. ಸಿ.ವಿ. ಕೆರಿಮನಿ ಇನ್ನಿಲ್ಲ

Kerimani
Published on

ಲಕ್ಷ್ಮೇಶ್ವರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಸಿ.ವಿ. ಕೆರಿಮನಿ (84) ಅವರು ಸೊಮವಾರ ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವರಾದ ಚನ್ನಪ್ಪ ವಿರೂಪಾಕ್ಷಪ್ಪ ಕೆರಿಮನಿ ಅವರು ಪಟ್ಟಣದ ಪುರಸಭಾ ಕಾಲೇಜು ಪ್ರಾಚಾರ್ಯರಾಗಿ, ಹಂಪಿ ಕನ್ನಡ ವಿ.ವಿ. ಆಡಳಿತ ಸದಸ್ಯರಾಗಿ, ಕವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ಗದಗ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನವಲಗುಂದದಲ್ಲಿ ನಡೆದ ತಾಲೂಕು ಕಸಾಪ ಸಮ್ಮೇಳಾನಾಧ್ಯಕ್ಷರಾಗಿದ್ದರು.

ಪುಲಿಗೆರೆ, ಭಾರತೀಯ ಹಬ್ಬಗಳು, ತಿರುಳ್ಗನ್ನಡನಾಡು ಪುಲಿಗೆರೆ, ಷಡಕ್ಷರದೇವ, ವೀರಶೈವ ಸಾಹಿತ್ಯ ಸಮೀಕ್ಷೆ, ಗೊಮ್ಮಟ ದರ್ಶನ, ಮೈಲಾರ ಮಹಾದೇವ, ಬೆಳ್ವೊಲ ಬೆಳಕು, ಚೆಲುವ ಕನ್ನಡ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಶರೀಫ ಪ್ರಶಸ್ತಿ, ಉತ್ತಮ ಎನ್.ಎಸ್. ಅಧಿಕಾರಿ, ರಾಜ್ಯಮಟ್ಟದ ಮನುಕುಲ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ, ಉತ್ತಮ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಸ್ತಿ, 2012ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net