ಪ್ರೊ. ಬರಗೂರರಿಗೆ ಸಾಂಸ್ಕೃತಿಕ ಸ್ನೇಹಗೌರವ

Baraguru
Published on

ಬೆಂಗಳೂರು: ಪ್ರೊ. ಬರಗೂರು ರಾಮಚಂದ್ರಪ್ಪಗೆ 75 ವರ್ಷ ದಾಟಿದ ಹಿನ್ನೆಲೆ ನಾಡೋಜ ಪ್ರೊ. ಬರಗೂರು ಸ್ನೇಹಬಳಗದ ವತಿಯಿಂದ ಭಾನುವಾರ (ಜು. 28) ಸಾಂಸ್ಕೃತಿಕ ಸ್ನೇಹಗೌರವ - ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ. ಚಂದ್ರಶೇಖರ ಕಂಬಾರ ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದಾರೆ. ಪ್ರೊ. ಬರಗೂರು ರಾಮಚಂದ್ರಪ್ಪ, ಮರಾಠಿ ಲೇಖಕ ಡಾ. ಶರಣಕುಮಾರ್ ಲಿಂಬಾಳೆ, ಕೇರಳದ ಮಾಜಿ ಸಚಿವೆ ಶೈಲಜಾ ಟೀಚರ್, ಮೇಲ್ಮನೆ ಸದಸ್ಯ ಪುಟ್ಟಣ್ಣ ಇತರರು ಭಾಗವಹಿಸಲಿದ್ದಾರೆ.

ಡಾ. ಯಲ್ಲಪ್ಪ ಹಿಮ್ಮಡಿ ಸಂಪಾದಕತ್ವದ ‘ಬರಗೂರು ಬುಕ್’ ಹಾಗೂ ಡಾ. ರಾಜು ಗುಂಡಾಪುರ ಮತ್ತು ಬಿ. ರಾಜಶೇಖರಮೂರ್ತಿ ಸಂಪಾದಕತ್ವದ ‘ನಮ್ಮ ಬರಗೂರ್ ಮೇಷ್ಟ್ರು’ ಪುಸ್ತಕಗಳು ಜನಾರ್ಪಣೆಗೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net