ಪ್ರೊ. ಬಿ.ವಿ. ಗುಂಜೆಟ್ಟಿ ಸ್ಮರಣೆ ಕಾರ್ಯಕ್ರಮ

13 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರೊ. ಬಿ.ವಿ. ಗುಂಜೆಟ್ಟಿ ಕನ್ನಡದ ಸೇವೆಯನ್ನು ಪ್ರಾಮಾಣಿಕತೆ, ಬದ್ಧತೆಯಿಂದ ಮಾಡಿದವರು. ಸಮಾಜ ಜೀವನದ ಒಂದು ಭಾಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೇಯೋಭಿಲಾಷೆಗಾಗಿ ಸುದೀರ್ಘ ಸೇವೆಗೈದ ಅಪರೂಪದ ವ್ಯಕ್ತಿ ಎಂದು ಡಾ. ಜಿ.ಎಂ. ಹೆಗಡೆ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಬಿ.ವಿ. ಗುಂಜೆಟ್ಟಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರೊ. ರಾಜಶೇಖರ ಜಾಡರ ಮಾತನಾಡಿ, ಪ್ರೊ. ಗುಂಜೆಟ್ಟಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಬೋಧನೆ ಮಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕನ್ನಡ ಸೇವೆ ಬದ್ಧತೆಯಿಂದ ಮಾಡಿದ್ದಾರೆ. ಪ್ರವಾಸ ಪ್ರಿಯ, ಸೌಂದರ್ಯ ಪ್ರಜ್ಞೆಯ ಅವರು ಸೌಜನ್ಯಯುತ ನಡೆ- ನುಡಿ ಹೊಂದಿದ್ದರು ಎಂದರು.

ಡಾ. ಓಂಕಾರ ಕಾಕಡೆ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಶಿ.ಮ. ರಾಚಯ್ಯನವರ ಅವರು ಪ್ರೊ. ಗುಂಜೆಟ್ಟಿ ಅವರ ವ್ಯಕ್ತಿತ್ವ ಹಾಗೂ ಸಾಧನೆ ಕುರಿತು ಮಾತನಾಡಿದರು.

ಕವಿವ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಪ್ರಭಾವತಿ ಗುಂಜೆಟ್ಟಿ ಹಾಗೂ ಕುಟುಂಬ ಸದಸ್ಯರು ಮತ್ತು ಜಿ.ಎಸ್. ಅಂಗಡಿ, ಡಾ. ಸಂಜೀವ ಕುಲಕರ್ಣಿ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ರವೀಂದ್ರ ಆಕಳವಾಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net