ದಲಿತರ ಆಶಾಕಿರಣ ಪ್ರೊ.ಬಿ.ಕೃಷ್ಣಪ್ಪ

30mnv02
ಮಾನ್ವಿ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಪ್ರೊ.ಬಿ.ಕೃಷ್ಣಪ್ಪ ಪುಣ್ಯಸ್ಮರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ತಾಪಂ ಮಾಜಿ ಸದಸ್ಯ ಶಾಂತಪ್ಪ ಕಪಗಲ್, ಬಿಎಸ್‌ಪಿ ಮುಖಂಡ ಶ್ಯಾಮಸುಂದರ ಕುಂಬ್ದಾಳ್, ರವೀಂದ್ರ ಜಾನೇಕಲ್, ಯಲ್ಲಪ್ಪ ಬಾದರದಿನ್ನಿ, ಈರೇಶ ಹುಲುಗುಂಚಿ ಇದ್ದರು.
Published on

ಮಾನ್ವಿ: ಸಾಮಾಜಿಕ ಚಿಂತನೆ ಹಾಗೂ ದೂರದೃಷ್ಟಿ ಪರಿಕಲ್ಪನೆಯೊಂದಿಗೆ ಪ್ರೊ.ಬಿ.ಕೃಷ್ಣಪ್ಪ ಶೋಷಿತ ಸಮುದಾಯದ ಧ್ವನಿಯಾಗಿದ್ದರು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕಪಗಲ್ ಹೇಳಿದರು.


ಪಟ್ಟಣದ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 26ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೋಷಿತರ ಶ್ರೇಯಸ್ಸಿಗಾಗಿ ಪ್ರತ್ಯೇಕ ಸಂಘಟನೆ ಹುಟ್ಟು ಹಾಕಿದರು. ಜಾತಿ ವಿನಾಶ ವೇದಿಕೆಯಲ್ಲಿ ಕ್ರಿಯಾಶೀಲರಾಗಿ, ದಲಿತ ಸಂಘರ್ಷ ಸಮಿತಿ ಸ್ಥಾಪಿಸಿ ಡಾ.ಬಿ.ಆಂಬೇಡ್ಕರ್ ಅವರಂತೆ ಬಿ.ಕೃಷ್ಣಪ್ಪ ಕೂಡ ದಲಿತರ ಆಶಾಕಿರಣವಾಗಿದ್ದರು ಎಂದರು.


ಪ್ರಮುಖರಾದ ಹನುಮಂತ ಕೋಟೆ, ಶಿವುಗೇನಿ ಬೈಲ್‌ಮರ್ಚಡ್, ಹನುಮಂತ್ರಾಯ ಕಪಗಲ್, ಚಂದ್ರಶೇಖರ ರಾಜೋಳ್ಳಿ, ಡಿ.ಹನುಮಂತ ಕಪಗಲ್, ಹನುಮಂತಪ್ಪ ಕೊಟ್ನೆಕಲ್, ಖಾಸಿಮಪ್ಪ ಸಂಗಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net