

ಬೈಲಹೊಂಗಲ: ಸೇವೆಯಲ್ಲಿ ಪ್ರಾಮಾಣಿಕತೆ ಇದ್ದರೆ ನಿವತ್ತಿ ನಂತರವೂ ಜನರು ಗೌರವದಿಂದ ಕಾಣುತ್ತಾರೆ ಎಂದು ಕೆಆರ್‌ಸಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ನಗರದ ಕೆಆರ್‌ಸಿಇಎಸ್ ಬಿ.ಇಡಿ ಕಾಲೇಜಿನಲ್ಲಿ ಸೇವಾ ನಿವತ್ತರಾದ ಹಿರಿಯ ಉಪನ್ಯಾಸಕ ಪಿ.ಎಂ.ಅಯಾಚಿತ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಅಯಾಚಿತ ಅವರ ಸೇವೆ ಅನನ್ಯ ಎಂದರು.
ನಿವತ್ತ ಡಿಡಿಪಿಐ ಎ.ಸಿ.ಗಂಗಾಧರ, ಉಪನ್ಯಾಸಕ ಬಿ.ಎನ್.ಮುದ್ದೆಣ್ಣವರ ಮಾತನಾಡಿದರು. ಪ್ರಾಚಾರ್ಯೆ ಮಹಾದೇವಿ ತಲ್ಲೂರ, ಅಮಿತ ಪಾಟೀಲ, ಎ.ಆರ್.ಕಾಳೆ, ಡಾ.ಬಿ.ಬಿ.ಪೊಲೀಸ್ ಪಾಟೀಲ, ಡಾ.ಎ.ಎಲ್.ಪಾಟೀಲ, ಪ್ರೊ.ಮಲ್ಲೇಶ ನಾಗನೂರ, ಡಾ.ಪ್ರವೀಣ ಕುಲಕರ್ಣಿ, ಸ್ವಪ್ನಾ ಅನಿಗೋಳ, ಎಸ್.ಎಸ್.ಬಳ್ಳಾರಿ, ಎ.ಬಿ.ಅಡಕಿ, ವೈ.ಎಂ.ಶಿವಬಸನ್ನವರ, ಎಂ.ವೈ.ಕ್ಷೀರಸಾಗರ, ಆರ್.ಆರ್.ಸದಲಗಿ, ಪ್ರೊ.ಪ್ರಭು ಹೂಲಿ, ಡಾ.ಭಾರತಿ ಕಾಡೇಶನವರ, ಬಸವರಾಜ ಕೊಳವಿ, ಡಾ.ಬಿ.ಎನ್.ಮುದೆನ್ನವರ, ಡಾ.ಎ.ಬಿ.ಕರಡಿಗುದ್ದಿ, ಕೆ.ಎಂ.ಬಿರಾದಾರ, ಬಿ.ಜಿ.ಜ್ಯೋಶಿ, ಡಾ.ಎಂ.ಎಸ್.ಗಡೆಣ್ಣವರ, ರಾಜು ಬಡಿಗೇರ, ಶಿಲ್ಪಾ ಅಂದಾನಶೆಟ್ಟಿ ಇದ್ದರು.
ಉಪನ್ಯಾಸಕ ಎನ್.ಡಿ.ಚಿನ್ನಪ್ಪಗೌಡರ ಸ್ವಾಗತಿಸಿದರು. ಪ್ರೊ.ಬಸವರಾಜ ಪುರಾಣಿಕಮಠ, ನೇತ್ರಾವತಿ ಪಾಟೀಲ ನಿರೂಪಿಸಿದರು. ಲಕ್ಷ್ಮೀ ಕನ್ನೂರ ವಂದಿಸಿದರು. ಕಲಾವಿದ ಆನಂದ ಬಡಿಗೇರ ಪ್ರಾರ್ಥಿಸಿದರು.