

ಮಂಗಳೂರು: ಕರಾವಳಿ ಭಾಗದ ಶಿಕ್ಷಣ ಸಂಸ್ಥೆ ಹಾಗೂ ಜನರಲ್ಲಿ ಕನ್ನಡದ ಕಂಪನ್ನು ಪಸರಿಸಿದ ಅಜಾರ ಶತ್ರು ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಎಂದು ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಹೇಳಿದರು.
ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು, ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಸಹಯೋಗದಲ್ಲಿ ಅಲೋಶಿಯಸ್‌ನ ಸಾನ್ನಿಧ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರತಿಷ್ಠಿತ ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಅವರು ಬಹುತೇಕ ವಿದ್ಯಾಸಂಸ್ಥೆಯಲ್ಲಿ ಕನ್ನಡ ಐಚ್ಛಿಕ ವಿಷಯ ಆರಂಭಕ್ಕೆ ಮುನ್ನುಡಿ ಬರೆದವರು. ಇಂದು ಕಾಸರಗೋಡು ಹಾಗೂ ಕರಾವಳಿಯಲ್ಲಿ ಕನ್ನಡದ ವಾತಾವರಣ ಉಳಿಯಲು ಇವರೆ ಪ್ರಮುಖ ಕಾರಣ. ಪುಸ್ತಕವೆಂದರೆ ಜ್ಞಾನ ಎಂಬುವುದಾಗಿ ತಿಳಿದಿದ್ದ ಇವರು ಹಣ ಇಲ್ಲದೆಯೂ ಪುಸ್ತಕಗಳನ್ನು ಪ್ರಕಟಿಸಿ ಓದುವಂತೆ ಮಾಡುವ ಕಲೆಯಲ್ಲಿ ಕರಗತರಿವರು. ಶಿಕ್ಷಣದ ಮೇಲೆ ಅಪಾರ ನಂಬಿಕೆ, ಗೌರವ ಹೊಂದಿದ್ದ ಅವರು ಸಾಹಿತ್ಯ, ಸರಸ್ವತಿ ಅವರ ಜೀವನದ ಪ್ರಮುಖ ಧ್ಯೇಯವಾಗಿತ್ತು ಎಂದರು.
ಸಂಸ್ಮರಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕಿ ಚಂದ್ರಕಲಾ ನಂದಾವರ, ಗುರುಗಳ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದು ಜೀವಮಾನದ ಪ್ರಮುಖ ಕ್ಷಣ. ಪ್ರೊ. ಎಸ್‌ವಿಪಿ ಅವರು ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬಿ ತಾವು ಸ್ವಾಸ ಪಡೆಯುತ್ತಿದ್ದರು. ಜೀವನದಲ್ಲಿ ಕಷ್ಟ ಅನುಭವಿಸಿ ಎಲ್ಲರ ಬದುಕನ್ನು ಸುಖವಾಗಿರಿಸುವಂತಹ ಜ್ಞಾನವನ್ನು ನೀಡುತ್ತಿದ್ದ ಅವರ ಬದುಕು ಅನನ್ಯವಾಗಿತ್ತು ಎಂದರು.
ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವ ಆಲ್ವಿನ್ ವಿ.ಡೆ'ಸಾ, ಪ್ರೊ. ಎಸ್‌ವಿಪಿ ಅವರ ಪುತ್ರ ಎಸ್‌ಪಿ ರಾಮಚಂದ್ರ ಬೆಂಗಳೂರು, ವಿಶ್ರಾಂತ ಪ್ರಾಧ್ಯಾಪಕರಾದ ಚಂದ್ರಕಲಾ ನಂದಾವರ, ಡಾ. ಪಿ.ಶ್ರೀ ಕೃಷ್ಣಭಟ್ ಉಪಸ್ಥಿತರಿದ್ದರು.
ನಿಟ್ಟೆ ವಿವಿ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸಾಯಿಗೀತ ಅವರು ಡಾ. ವಾಮನ ನಂದಾವರ- ಚಂದ್ರಕಲಾ ನಂದಾವರ ದಂಪತಿಗಳ ಬಗ್ಗೆ ಹಾಗೂ ಡಾ.ಮೀನಾಕ್ಷಿ ರಾಮಚಂದ್ರ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. 'ಅಂಕಿತ ಪುಸ್ತಕ' ಬೆಂಗಳೂರು ಪ್ರಾಯೋಜಕತ್ವದದಲ್ಲಿ ರತ್ನಾವತಿ ಬೈಕಾಡಿ, ಜಯಲಕ್ಷ್ಮಿ ಶಾಸಿ ಅವರಿಂದ ಎಸ್. ವಿ.ಪಿ ಗೀತಗಾಯನ ಕಾರ್ಯಕ್ರಮದಲ್ಲಿ ನಡೆಯಲಿದೆ.
ಸೈಂಟ್ ಅಲೋಶಿಯಸ್ ವಿವಿ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ದಿನೇಶ್ ನಾಕ್ ವಂದಿಸಿದರು. ನಿವೃತ್ತ ಪ್ರಾಧ್ಯಪಕ ಡಾ. ಆರ್ ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
----------------
ಪ್ರತಿಷ್ಠಿತ ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರಧಾನ
2024 ನೇ ಸಾಲಿಗೆ ಹಿರಿಯ ಜಾನಪದ ವಿದ್ವಾಂಸರೂ ವಿಶ್ರಾಂತ ಪ್ರಾಧ್ಯಾಪಕರೂ ಆಗಿರುವ ಡಾ. ವಾಮನ ನಂದಾವರ(ಅನುಪಸ್ಥಿತಿಯಲ್ಲಿ) ಮತ್ತು ವಿಶ್ರಾಂತ ಪ್ರಾಧ್ಯಾಪಕಿ ಚಂದ್ರಕಲಾ ನಂದಾವರ ದಂಪತಿ ಹಾಗೂ 2025ನೇ ಸಾಲಿಗೆ ವಿದ್ವಾಂಸರು, ವಿಶ್ರಾಂತ ಕನ್ನಡ ಪ್ರಾಧ್ಯಾಪಕರೂ ಆಗಿರುವ ಡಾ. ಪಿ.ಶ್ರೀ ಕೃಷ್ಣಭಟ್ ಅವರಿಗೆ ಪ್ರತಿಷ್ಠಿತ ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರಧಾನ ಮಾಡಲಾಯಿತು.