ತರಬೇತಿ ಸಂಸ್ಥೆಗಳಿಂದ ಕಾಯಕಯೋಗಿಗಳ ನಿರ್ಮಾಣ

NARAGUND
Published on

ನರಗುಂದ: ವಿಶ್ವಾದ್ಯಂತ ಕಾಯಕ ಯೋಗಿಗಳನ್ನು ನಿರ್ಮಾಣ ಮಾಡುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಶಿರೋಳ ತೋಂಟದಾರ್ಯಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾಲೇಜ್ ಘಟಿಕೋತ್ಸವ, ಪ್ರತಿಭಾ ಪುರಸ್ಕಾರ, ಅಪ್ರೆಂಟಿಸ್ ಸಂದರ್ಶನ ಹಾಗೂ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ‘ಶಿರೋಳದ ಶ್ರೀಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಉತ್ತಮ ತರಬೇತಿ ನೀಡುವುದರ ಜತೆಗೆ ತರಬೇತುದಾರರಿಗೆ ಉದ್ಯೋಗ ನೀಡುವ ಅಪ್ರೆಂಟಿಸ್ ಸಂದರ್ಶನ ಏರ್ಪಡಿಸುತ್ತಿರುವುದು ಶಿರೋಳ ತೊಂಟದಾರ್ಯ ವಿದ್ಯಾಪೀಠದ ಹೆಮ್ಮೆ’ ಎಂದರು.

ಬೆಂಗಳೂರಿನ ಲಖನ ಎಂ, ಕುಮಾರ ಎನ್, ಬಸವರಾಜ ಗೊಜನೂರ, ಲಾಲಸಾಬ ಅರಗಂಜಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂದರ್ಶನದಲ್ಲಿ ಭಾಗಿಯಾದ 48 ಅಪ್ರೆಂಟಿಸ್ ತರಬೇತುದಾರರ ಪೈಕಿ 45 ಜನರಿಗೆ ಉದ್ಯೋಗ ಪತ್ರ ನೀಡಲಾಯಿತು. ತರಬೇತುದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಮತ್ತು ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಲೋಕಪ್ಪ ಕರಕೀಕಟ್ಟಿ, ದ್ಯಾಮಣ್ಣ ಕಾಡಪ್ಪನವರ, ಶಿವು ಯಲಿಬಳಿ, ಗುರಬಸಯ್ಯ ನಾಗಲೋಟಿಮಠ, ಮುಖ್ಯೋಪಾಧ್ಯಾಯ ಎಸ್.ವಿ. ವಸ್ತ್ರದ, ಈರಣ್ಣ ಸೋನಾರ, ಶಂಕರಪ್ಪ ಕುಪ್ಪಸ್ತ, ಶ್ರೀಧರ ಬೇವಿನಕಟಿ,್ಟ ವೀರನಗೌಡ, ಸೋಮಶೇಖರಪ್ಪ ಗೊರವರ, ಪ್ರಭುಲಿಂಗ ಶಿರಿಯಣ್ಣವರ, ಭೂಪತಿರಾಜ ಧೋತರದ, ಕಾಳಮ್ಮ ಕಮ್ಮಾರ, ಪ್ರೀತಿ ಚಿಕ್ಕಮಠ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ ಇತರರಿದ್ದರು. ಪ್ರಾಚಾರ್ಯ ಬಸವರಾಜ ಸಾಲಿಮಠ, ಶ್ರೀಕಾಂತ ದೊಡಮನಿ, ಮಲ್ಲಪ್ಪ ಸಂಗಳದ, ಬಿ. ಸಾಲಿಮಠ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net