

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗಣಿ ಕಂಪನಿಯ ಸಮನ್ವಯ ವಿಭಾಗದ ಪ್ರಧಾನ ವ್ಯವಸ್ಥಾಪಕ ಹನುಮಂತಪ್ಪ ನೀರಮಾನ್ವಿಗೆ ಸಿಐಟಿಯು ಪ್ರಮುಖರು ಮನವಿ ಸಲ್ಲಿಸಿದರು.
ಕಾರ್ಮಿಕರ ವೇತನ ಒಪ್ಪಂದ ಯೋಜನೆ ಜಾರಿಯಾಗಬೇಕು. ವೈದ್ಯಕೀಯ ಅನರ್ಹತೆ ಮೇಲೆ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡಬೇಕು. ವಿದ್ಯಾರ್ಹತೆಗೆ ತಕ್ಕಂತೆ ದರ್ಜೆ ಹಾಗೂ ಮುಂಬಡ್ತಿ ನೀಡಬೇಕು. ಉತ್ಪಾದನಾ ಆಧಾರಿತ ಬೋನಸ್ ನೀಡಬೇಕೆಂದು ಆಗ್ರಹಿಸಿದರು. ಗೆಜ್ಜಲಗಟ್ಟಾ ಗ್ರಾ.ಪಂ ಸದಸ್ಯ ರಮೇಶ ವೀರಾಪೂರು, ಕಂಪನಿ ಕಾರ್ಮಿಕರಾದ ಬಾಬು ಸಾಗರ್, ಫಕ್ರುದ್ದೀನ್, ಅಲ್ಲಾಭಕ್ಷ, ಭೀಮಣ್ಣ ಉಪ್ಪೇರಿ, ದಾವೂದ್, ಮೇಘನಾಥ್, ಮಲ್ಲಿಕಾರ್ಜುನ್, ದೇವು, ಆದಪ್ಪ ಕೋಠಾ, ಯಮನಪ್ಪ ಇದ್ದರು.