ಪ್ರಾಡ್ ಲಿಂಕ್ ಕಳುಹಿಸಿ ೧.೯೯ ಲಕ್ಷ ರೂ. ವಂಚನೆ

cybe crime
Published on

ಬ್ಯಾಡಗಿ: ವೃದ್ಧರೊಬ್ಬರ ಮೊಬೈಲ್‌ಗೆ ಪ್ರಾಡ್ ಲಿಂಕ್‌ಅನ್ನು ಕಳುಹಿಸಿ ೧.೯೯ ಲಕ್ಷ ರೂ. ವಂಚಿಸಿದ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿಯ ವಿದ್ಯಾನಗರದ ಯಲ್ಲಪ್ಪ ಸಂಗಪ್ಪ ಬೇವಿನಮಟ್ಟಿ (೬೨) ಎಂಬುವರಿಗೆ ಮೋಸ ಮಾಡಿರುವುದು.

ಇವರ ಮೊಬೈಲ್‌ಗೆ ಪ್ರಾಡ್ ಲಿಂಕ್ ಕಳುಹಿಸಿದ ಅಪರಿಚಿತ ವ್ಯಕ್ತಿ ಅದರ ಮೂಲಕ ೧.೯೯ ಲಕ್ಷ ರೂ. ಬೇರೆ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net