ಬಸವಲಿಂಗ ಮರುಳಸಿದ್ಧ ಶ್ರೀಗಳ ಅಮೃತ ಶಿಲಾಮೂರ್ತಿ ಮೆರವಣಿಗೆ

Procession of the Amrit Shila Murti of Basavalinga Marulasiddha Sri
ಕಲಕೇರಿಯ ಲಿಂ. ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
Published on

ಕಲಕೇರಿ: ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಲಿಂ. ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿ ಮೆರವಣಿಗೆ ಭಾನುವಾರ ಸಂಭ್ರಮದಿಂದ ನಡೆಯಿತು.

ಶ್ರೀ ಯಲ್ಲಾಲಿಂಗೇಶ್ವರ ಮಹಾಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಗಂಗಸ್ಥಳಕ್ಕೆ ತೆರಳಿ ಹಿರೇಮಠಕ್ಕೆ ಮರಳಿತು.

ಕಲಕೇರಿಯ ಪಂಚರಂಗಿ ಸಂಸ್ಥಾನ ಗದ್ದುಗೆಮಠದ ಮಡಿವಾಳೇಶ್ವರ ಶ್ರೀಗಳು, ನಾವದಗಿ ಪರ್ವತೇಶ್ವರ ಸಂಸ್ಥಾನ ಬೃಹನ್ಮಠದ ರಾಜಗುರು ರಾಜೇಂದ್ರ ಒಡೆಯರ್​ ಶ್ರೀಗಳು, ದೇವರಹಿಪ್ಪರಗಿ ಅವುಗೇಶ್ವರ ತಪೋಧಾಮದ ಶಿವಯೋಗಿ ಸ್ವಾಮಿಗಳು, ಕಲಕೇರಿ ಹಿರೇಮಠದ ಸಿದ್ಧರಾಮ ಶ್ರೀಗಳು ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿ ಧ್ವಜ ಸಂಕೇತದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಅಂದಾಜು 1001 ಸುಮಂಗಲೆಯರ ಪೂರ್ಣಕುಂಭ, ಡೊಳ್ಳುಕುಣಿತ ಸೇರಿ ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ರವಣಿಗೆಯಲ್ಲಿ ಭಕ್ತರು ವಿವಿಧ ೂಷಣೆ ಮೊಳಗಿಸಿದರು. ಬರಿಗಾಲಿನಲ್ಲಿ ಕುಂಭಹೊತ್ತ ಮಹಿಳೆಯರು ಮತ್ತು ಭಕ್ತ ಸಮೂಹಕ್ಕಾಗಿ ದಾರಿಯುದ್ದಕ್ಕೂ ಟ್ಯಾಂಕರ್​ನಿಂದ ನೀರು ಸಿಂಪಡಿಸಲಾಯಿತು. ಭಕ್ತರಿಗೆ ತಂಪಾದ ನೀರು, ಪಾನಕ, ಮಜ್ಜಿಗೆ ವಿತರಿಸಲಾಯಿತು. ಶ್ರೀಮಠದಲ್ಲಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಶ್ರೀಮಠದ ಪರ ಸೇವಾಧಾರಿಗಳಿಗೆ ಶ್ರೀರಕ್ಷೆ ನೀಡಿ ಗೌರವಿಸಲಾಯಿತು.

ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಯುವಶಕ್ತಿ ಮತ್ತು ಹಿರಿಯರ ಮಾರ್ಗದರ್ಶನ ಹಾಗೂ ಮಹಿಳೆಯ ಅಂತ@ಶಕ್ತಿ ಈ ಮೂರು ಶಕ್ತಿಗಳು ನಿಸ್ವಾರ್ಥದಿಂದ ತನು, ಮನ, ಧನದಿಂದ ಸೇವೆ ಸಲ್ಲಿಸಿ ಮಠದ ಏಳಿಗೆಗೆ ಕಾರಣರಾಗುತ್ತಿದ್ದಾರೆ. ಇದು ಸಮಾಜಮುಖಿ, ಸಂಸ್ಕಾರಯುತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಮತೇತ್ರದ ಶಾಸಕ ರಾಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಪ್ರಭುಗೌಡ ಬಿರಾದಾರ, ಸಿದ್ದು ಬುಳ್ಳಾ, ಹಿರಿಯರಾದ ಶಾಂತಪ್ಪ ಪಟ್ಟಣಶೆಟ್ಟಿ, ಷಣ್ಮುಕಪ್ಪ ಝಳಕಿ ವಿದ್ಯಾನಂದ ಹಿರೇಮಠ, ಶರಣಯ್ಯ ಮಠಪತಿ, ಶಾಂತಯ್ಯ ಹಿರೇಮಠ, ದುಂಡಯ್ಯ ಚಿಕ್ಕಮಠ, ರಮೇಶ ಅಡಕಿ, ಕುಮಾರಸ್ವಾಮಿ ಜಾಲಹಳ್ಳಿಮಠ, ಬಸವರಾಜ ಜಂಬಗಿ, ಶಿವಾನಂದ ಕಾದಳ್ಳಿ, ಗುರುರಾಜ ಅಡಕಿ, ಶಾಂತಯ್ಯ ಗಣಾಚಾರಿ, ಶಾಂತಗೌಡ ಪಾಟೀಲ, ದೇವಿಂದ್ರ ಕಡಕೋಳ, ಮೋತಿಲಾಲ ಕುಲಕರ್ಣಿ, ಶಿವಾನಂದ ಗಣೇಶಮಠ ಇತರರಿದ್ದರು.

ಕೆಎಲ್​ಕೆ 16&1ಅ:

ಕಲಕೇರಿಯ ಲಿಂ. ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿ ಧ್ವಜಸಂಕೇತದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಡಿವಾಳೇಶ್ವರ ಶ್ರೀಗಳು, ರಾಜಗುರು ರಾಜೇಂದ್ರ ಒಡೆಯರ್​ ಶ್ರೀಗಳು, ಸಿದ್ಧರಾಮ ಶಿವಾಚಾರ್ಯರು, ಶಾಸಕ ರಾಜುಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net