

ಮೈಸೂರು: ಶ್ರೀ ಆದಿಗುರು ಶಂಕರಾಚಾರ್ಯ ಜಯಂತಿ ಅಂಗವಾಗಿ ನಗರದ ವಿವಿಧ ರಸ್ತೆಗಳಲ್ಲಿ ಭಾನುವಾರ ಶ್ರೀಶಂಕರಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಅಗ್ರಹಾರದಲ್ಲಿರುವ ಅಭಿನವ ಶಂಕರಾಲಯ ಶಂಕರ ಮಠದಲ್ಲಿ ಶ್ರೀ ಶಂಕರ ಸನ್ನಿಧಿಯಲ್ಲಿ ರುದ್ರಾಭಿಷೇಕ, ವೇದಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ನವಗ್ರಹ ಜಪ ಸೇರಿದಂತೆ ಇತ್ಯಾದಿ ಪೂಜಾ ವಿಧಿ ವಿಧಾನಗಳು ಜರುಗಿದವು. ಬಳಿಕ ಭಕ್ತಾದಿಗಳಿಗೆ ಪ್ರಸಾದದ ಬಳಿಕ ರಾತ್ರಿ ಶಂಕರ ಮಠದಿಂದ ಭವ್ಯ ಮೆರವಣಿಗೆ ಶಂಕರ ಮಠದ ಮುಖ್ಯ ರಸ್ತೆಯಿಂದ ಉತ್ತರಾದಿ ಮಠದ ರಸ್ತೆ ಮಾರ್ಗವಾಗಿ ನಾದಸ್ವರ ಹಾಗೂ ಭಜನೆ ಮೂಲಕ ಸಾಗಿತು.
ಶಾಸಕರಾದ ಟಿ.ಎಸ್.ಶ್ರೀವತ್ಸ, ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ, ಶಂಕರಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್, ಸಪ್ತ ಮಾತೃಕೆ ದೇವಸ್ಥಾನದ ಧರ್ಮಾಧಿಕಾರಿ ಭಾಸ್ಕರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಹೊಯ್ಸಳ ಕರ್ನಾಟಕದ ನಿರ್ದೇಶಕ ಮೈಸೂರು ರಂಗನಾಥ್, ಲೆಕ್ಕಪರಿಶೋಧಕ ಅಚ್ಯುತ, ಮುಖಂಡರಾದ ಕೆ.ಎಂ. ನಿಶಾಂತ್, ಪ್ರಶಾಂತ್, ಎಂ.ಆರ್.ಬಾಲಕೃಷ್ಣ, ಜ್ಯೋತಿ, ಶ್ರೀಕಾಂತ್ ಕಶ್ಯಪ್, ಮೀನಾ, ಹರೀಶ್, ಸುಚಿಂದ್ರ, ಸುಧೀಂದ್ರ ಇತರರು ಇದ್ದರು.