ಪ್ರೋಬಸ್ ಕ್ಲಬ್ ಪದಗ್ರಹಣ

h18- Probus club
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಬಸವೇಶ್ವರನಗರ ಪ್ರೋಬಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಇತ್ತೀಚೆಗೆ ಹೆಬಸೂರ ಭವನದಲ್ಲಿ ಜರುಗಿತು.

2023-24ನೇ ಸಾಲಿಗೆ ಯಶವಂತ ಅಳಗವಾಡಿ ಅಧ್ಯಕ್ಷ, ಡಾ. ಚಂದ್ರಶೇಖರ ಪಾಟೀಲ ಉಪಾಧ್ಷಕ್ಷ, ಮಲ್ಲನಗೌಡ ಪಾಟೀಲ ಕಾರ್ಯದರ್ಶಿ, ಡಾ. ಡಿ.ಆರ್. ಹಿರೇಗೌಡರ ಉಪ ಕಾರ್ಯದರ್ಶಿ, ವಿರೂಪಾಕ್ಷ ಭೂಸನೂರ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡರು.

ನಿಕಟಪೂರ್ವ ಅಧ್ಯಕ್ಷ ಹನುಮಂತಪ್ಪ ಐರಣಿ, ಕಾರ್ಯದರ್ಶಿ ಪ್ರೊ. ರಾಮಪ್ಪ ರಾಮಜಿ ಅವರು ಅಧಿಕಾರ ಹಸ್ತಾಂತರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ. ನಾಗರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಎಲ್ಲರ ಮುಖ್ಯ ಗುರಿಯಾಗಬೇಕು. ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.

ಬಸವರಾಜ ಹೆಬಸೂರ, ನೂತನ ನಿರ್ದೇಶಕರಾದ ಪ್ರೊ. ವಿ.ಎಸ್. ಧೋತ್ರದ, ಪ್ರೊ. ವೀರಣ್ಣ ಸುರಕೋಡ, ಡಾ. ಯು.ಎಸ್. ಬಿರಾದಾರ, ಎಸ್.ಜಿ. ಭದ್ರಾಪುರ, ಅರುಣಾ ಹತ್ತಿಕಾಳ ಉಪಸ್ಥಿತರಿದ್ದರು.

ಎಫ್.ಬಿ. ಬೀರವಳ್ಳಿ ಸ್ವಾಗತಿಸಿದರು. ಡಾ. ಸ್ನೇಹಾ ಭೂಸನೂರ ನಿರೂಪಿಸಿದರು. ಡಾ. ಡಿ.ಆರ್. ಹಿರೇಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net