ಪ್ರೋಬಸ್ ಕ್ಲಬ್ ಮಾಸಿಕ ಸಭೆ

New PB
Published on

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ರಾಜಧಾನಿ ಕಾಲನಿಯ ಪ್ರೋಬಸ್ ಕ್ಲಬ್​ನಲ್ಲಿ ಭಾನುವಾರಂದು ಮಾಸಿಕ ಸಭೆ ಏರ್ಪಡಿಸಲಾಗಿತ್ತು.

ಅತಿಥಿಯಾಗಿದ್ದ ಡಾ. ಗುರುನಾಥ ಹಬೀಬ ಮಾತನಾಡಿ, ಹಿರಿಯ ನಾಗರಿಕರು ಪಾಲಿಸಬೇಕಾದ ಆರೋಗ್ಯ ಸಲಹೆಗಳನ್ನು ಸೂಚಿಸಿದರು.

ಪ್ರತಿ ಕ್ಷಣ ಆಹಾರ, ವಿಹಾರ, ಚಟುವಟಿಕೆ, ಕೋಪದ ಬಗ್ಗೆ ನಿಗಾ ವಹಿಸಬೇಕು. ರಕ್ತದೊತ್ತಡ, ಮಧುಮೇಹ ನಿಯಂತ್ರಣದತ್ತ ಗಮನ ಹರಿಸಬೇಕು. ಸಮಾಧಾನ, ಮನೋಲ್ಲಾಸ ಕಾಪಾಡಿಕೊಳ್ಳುವುದರಿಂದ ದೀರ್ಘ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಆರ್.ಸಿ. ಹಲಗತ್ತಿ ಮಾತನಾಡಿ, ಹಿರಿಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಘು ಮಗಜಿಕೊಂಡಿ, ಹಿರಿಯ ಸಾಹಿತಿ ಎಸ್.ವಿ. ಪಟ್ಟಣಶೆಟ್ಟಿ, ಎಂ.ಎ. ಹಿರೇಮಠ, ಚನ್ನಬಸಪ್ಪ ಧಾರವಾಡಶೆಟ್ಟರ, ಎನ್.ಬಿ. ಬೆಳ್ಳಿಗಟ್ಟಿ, ಅಪ್ಪಾಸಾಹೇಬ ಚವ್ಹಾಣ, ಡಿ.ಡಿ. ಮಾಳಗಿ, ಎಸ್.ವಿ. ಕೊಟಗಿ, ವೀರಣ್ಣ ಗೂಹೇಶ್ವರ, ಎಚ್.ಪಿ. ಟಗರಗುಂಟಿ ಹಾಗೂ ಇತರರು ಹಾಜರಿದ್ದರು. ಇತ್ತೀಚಿನ ದಿನಗಳಲ್ಲಿ ಜನ್ಮದಿನ ಆಚರಿಸಿಕೊಂಡ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

ಎಂ.ಜಿ. ಹಿರೊಳ್ಳಿ ಸ್ವಾಗತಿಸಿದರು. ವಿ.ಬಿ. ಮಾಗನೂರ ನಿರೂಪಿಸಿದರು. ಎಂ.ಪಿ. ಕುಂಬಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net