

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ರಾಜಧಾನಿ ಕಾಲನಿ ಪ್ರೋಬಸ್ ಕ್ಲಬ್ 6ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಜು. 27ರಂದು ಬೆಳಗ್ಗೆ 10.30ಕ್ಕೆ ನಗರದ ಚವ್ಹಾಣ ಗ್ರೀನ್ ಗಾರ್ಡನ್‌ನಲ್ಲಿ ಏರ್ಪಡಿಸಲಾಗಿದೆ.
ಕ್ಲಬ್ ಅಧ್ಯಕ್ಷ ಅಪ್ಪಾಸಾಹೇಬ ಚೌಹಾಣ ಅಧ್ಯಕ್ಷತೆ ವಹಿಸುವರು. 2023-24ನೇ ಸಾಲಿನ ಪದಾಧಿಕಾರಿಗಳಾಗಿ ಎನ್.ಬಿ. ಬೆಳ್ಳಿಗಟ್ಟಿ ಅಧ್ಯಕ್ಷ, ರಾಧಾ ಪಾಂಡುರಂಗಿ ಉಪಾಧ್ಯಕ್ಷೆ, ಎಂ.ಜಿ. ಹಿರೋಳಿ ಕಾರ್ಯದರ್ಶಿ, ರಘು ಮಗಜಿಕೊಂಡಿ ಸಹಕಾರ್ಯದರ್ಶಿ, ಆರ್.ಬಿ. ಕಮಡೊಳ್ಳಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.