ಜಿಲ್ಲೆಯ ಜವಳಿ ಉದ್ಯಮಕ್ಕೆ ಶಾರ್ಟ್​ ಸರ್ಕ್ಯೂಟ್​.

29GDG01(2)
Published on

ಶಿವಾನಂದ ಹಿರೇಮಠ ಗದಗ
ಕಚ್ಚಾ ವಸ್ತು ಮತ್ತು ಮಾರುಕಟ್ಟೆ ಕೊರತೆಯಿಂದ ಮೊದಲೇ ಹೈರಾಣಾಗಿರುವ ಜವಳಿ ಕ್ಷೇತ್ರವು ವಿದ್ಯುತ್​ ಮೀಟರ್​ ಠೇವಣಿ ಮೊತ್ತ ಏರಿಕೆಯಿಂದ ಶಾರ್ಟ್​ ಸರ್ಕ್ಯೂಟ್​ನಂತಾಗಿದೆ. ಈವರೆಗೆ ಒಂದು ಎಚ್​ಪಿ ಮೀಟರ್​ ಅಳವಡಿಕೆಗೆ ಇದ್ದ 100 ರೂ. ಪಾವತಿಯನ್ನು 140 ರೂ.ಗೆ ಹೆಚ್ಚಿಸಲಾಗಿದೆ. ನೇಕಾರನೋರ್ವ ಸಾಮಾನ್ಯವಾಗಿ 10 ಎಚ್​ಪಿ ಮೀಟರ್​ ಬಳಕೆ ಮಾಡುವುದರಿಂದ ಕನಿಷ್ಠ 400 ರೂ. ಅಧಿಕ ಪಾವತಿ ಪಾಡುವುದು ಅನಿವಾರ್ಯತೆ ಸೃಷ್ಟಿಯಾಗಿದೆ. ಠೇವಣಿ ಮೊತ್ತ ಅಧಿಕಗೊಂಡಿದ್ದರಿಂದ ಮಗ್ಗಗಳ ಉದ್ದಿಮೆಗೆ ಪೆಟ್ಟು ಬಿದ್ದಿದೆ.
ಜಿಲ್ಲೆಯಲ್ಲಿ ಬೆಟಗೇರಿ, ಗಜೇಂದ್ರಗಡ ಮತ್ತ್ತು ಶಿಗ್ಲಿಯಲ್ಲಿ ಕೈಮಗ್ಗ/ವಿದ್ಯುತ್​ ಮಗ್ಗಗಳ ಉದ್ಯಮ ನೆಲೆಯೂರಿದೆ. ಜಿಲ್ಲೆಯಲ್ಲಿ 771 ವಿದ್ಯುತ್​ ಮಗ್ಗಗಳ ಗುಡಿಕೈಗಾರಿಕೆ ಇದ್ದು, 3595 ವಿದ್ಯುತ್​ ಮಗ್ಗಗಳು, 2370 ಕೈಮಗ್ಗಗಳಿವೆ. ವಿದ್ಯುತ್​ ಮಗ್ಗಗಳ ನೇಕಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಈ ಮೊದಲು ವಿತರಿಸಲಾಗುತ್ತಿದ್ದ ವಿಮೆಯನ್ನು ಸ್ಥಗಿತಗೊಳಿಸಿದ ಪರಿಣಾಮ ನೇಕಾರರಿಗೆ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಇನ್ನೊಂದೆಡೆ ಸೀರೆ ನೇಯಲು ಅಗತ್ಯ ಇರುವ ಕಚ್ಚಾ ವಸ್ತುಗಳ ಬೆಲೆಗಳು ದ್ವಿಗುಣಗೊಂಡು ಉದ್ಯಮ ಹೊರೆಯಾಗಿದೆ. ಈ ಎಲ್ಲ ಸಮಸ್ಯೆಗಳ ನಡುವೆ ವಿದ್ಯುತ್​ ಮೀಟರ ಠೇವಣಿ ಮೊತ್ತ ಏರಿಕೆ ಬರೆಯಾಗಿ ಪರಿಣಮಿಸಿದೆ.

ವಿಮೆ ಸ್ಥಗಿತ:
ಕೋವಿಡ್​ ನಂತರ ವಿದ್ಯುತ್​ ಮಗ್ಗ ನೇಕಾರರಿಗೆ ಕಲ್ಪಿಸಲಾಗಿದ್ದ ವಿಮೆ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಕೋವಿಡ್​ ಪೂರ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿದ್ಯುತ್​ ಮಗ್ಗ ನೇಕಾರರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿತ್ತು. 330 ರೂ. ವಾಷಿರ್ಕ ಪಾವತಿ ಇದ್ದು, 80 ರೂ. ನೇಕಾರರು ಪಾವತಿ ಮಾಡಿದ್ದರೆ ಇನ್ನೂಳಿದ 250 ರೂ. ಸರ್ಕಾರ ಸಬ್ಸಿಡಿ ರೂಪದಲ್ಲಿ ಪಾವತಿ ಮಾಡುತ್ತಿತ್ತು. ನೇಕಾರರಲ್ಲಿ ಸ್ವಾಭಾವಿಕ ಸಾವು ಸಂಭವಿಸಿದರೆ 60 ಸಾವಿರ, ಅಪಘಾತಕ್ಕೀಡಾಗಿ ಸಾವು ಸಂಭವಿಸಿದರೆ 1.50 ಲಕ್ಷ ವಿಮೆ ನೇಕಾರರ ಕುಟುಂಬಕ್ಕೆ ಸಿಗುತ್ತಿತ್ತು. ಈಗ ಈ ಸೌಲಭ್ಯ ಸ್ಥಗಿತಗೊಂಡ ಪರಿಣಾಮ ಭದ್ರತೆಯೂ ಇಲ್ಲದಂತಾಗಿದೆ.
ಕಚ್ಚಾ ಸಾಮಗ್ರಿ: ಸೀರೆ ನೇಯ್ಗೆಗೆ ಬಳಸಲಾಗುವ ಕಚ್ಚಾ ಸಾಮಗ್ರಿ ವೆಚ್ಚ ಏರಿಕೆಯಾಗಿದೆ. ಒಂದು ಕೆಜಿ ರೇಷ್ಮೆ ಮೊತ್ತ ಮಾರುಕಟ್ಟೆಯಲ್ಲಿ 5500 ರೂ. ಇದೆ. ಈ ಮೊದಲು 3500 ರೂ. ಇತ್ತು. ಕೆಜಿ ಕಾಟನ್​ ಗೆ ಸರಾಸರಿ 500 ರೂ. ಮೊತ್ತವಿದ್ದು, ಈ ಮೊದಲು ಕೆಜಿಗೆ 360 ರೂ. ಇತ್ತು.

ಅಕ್ರಮ ನಿಯಂತ್ರಣ: ಕೈಮಗ್ಗಗಳ ಖರೀದಿಗಾಗಿ ಸಾಮನ್ಯರಿಗೆ ಶೇ.50 ರಷ್ಟು, ಎಸ್ಸಿ ಎಸ್ಟಿಗೆ ಶೇ. 90 ರಷ್ಟು ಸರ್ಕಾರ ಸಬ್ಸಿಡಿ ನೀಡುತ್ತಿದೆ. ಈ ಮೊದಲು ಮಗ್ಗಗಳ ಖರೀದಿಗೂ ಮೊದಲೇ ಸಬ್ಸಿಡಿ ಹಣ ಬಿಡುಗಡೆ ಮಾಡುವ ್ರಂಟ್​ ಲೈನ್​ ನಿಯಮ ಇತ್ತು. ಲಾನುಭಗಿಳು ಈ ನಿಯಮ ರ್ದುಬಳಕೆ ಮಾಡಿಕೊಂಡು ಮಗ್ಗಳ ಖರೀದಿ ಮಾಡದೆ ಸರ್ಕಾರದಿಂದ ಸಬ್ಸಿಡಿ ಹಣ ಲಪಟಾಯಿಸುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ಮಗ್ಗಗಳ ಖರೀದಿ ಮತ್ತು ಇಲಾಖಾ ಅಧಿಕಾರಿಗಳ ಸ್ಥಳ ವೀಕ್ಷಣೆ ನಂತರ ಸಬ್ಸಿಡಿ ಹಣ ಬಿಡುಗಡೆ ಮಾಡುವ ಬ್ಯಾಕ್​ ಲೈನ್​ ನಿಯಮ ಅಳವಡಿಸಿಕೊಂಡ ನಂತರ ಕ್ರಮಕ್ಕೆ ತೆರೆ ಬಿದ್ದಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಮಗ್ಗಗಳ ವಿತರಣೆ
ಅವಧಿ - ವಿತರಣೆ

2011/12 - 73
2012/13 - 19
2013/14 - 75
2014/15 - 37
2015/16 - 45
2016/17 - 10
2017/18 - 71
2018/19 - 00(ಕೋವಿಡ್​)
2019/20 - 09
2020/21 - 22

ಕೋಟ್​:
20ಎಚ್​ ಪಿ ವರೆಗೂ ನೇಕಾರರಿಗೆ ವಿದ್ಯುತ್​ ಉಚಿತ ನೀಡುವುದಾಗಿ ತೆರದಾಳ ಕ್ಷೇತ್ರದ ಚುನಾವಣಾ ಭಾಷಣದ ವೇಳೆ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈ ಭರವಸೆ ಈಡೇರಿಸಬೇಕು ಎಂದು ರಾಜ್ಯ ಟಕದಿಂದ ಮನವಿ ಮಾಡಲಾಗಿದೆ ಮತ್ತು ರಾಜ್ಯ ವಿದ್ಯುತ್​ ಮಗ್ಗ ಸಂಸ್ಥೆಯಿಂದ ಗದಗ ತಾಲೂಕಿನ ನರಸಾಪುರದಲ್ಲಿ ತರಬೇತಿ ಕೇಂದ್ರ ಇದ್ದು, ಕಳೆದ 2 ವರ್ಷದಿಂದ ತರಬೇತಿಗಳೇ ನಡೆದಿಲ್ಲ. ಸೀರೆ ನೇಯುವುದು ಒಂದು ಕೌಶಲ್ಯ ಉದ್ಯಮವಾಗಿದ್ದು ತರಬೇತಿ ಅತ್ಯಗತ್ಯ. ಹಾಗಾಗಿ ಈ ತರಬೇತಿ ಕೇಂದ್ರವನ್ನು ತೆರೆಯಲು ಆಗ್ರಹಿಸುತ್ತೇವೆ.

-ಅನಿಲ್​ ಗಡ್ಡಿ, ಜಿಲ್ಲಾಧ್ಯಕ್ಷರು, ಜವಳಿ ಉದ್ದಿಮೆದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net