ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ, ಭೀಮಾತೀರದಲ್ಲಿ ತೀರದ ದಾಹ, ನೀರಿಗಾಗಿ ಅಡವಿ ವಸತಿಗಳಿಗೆ ದೌಡು

1658197571891
Published on

ವಿಜಯಪುರ: ಭೀಮಾತೀರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದ್ದು, ಕುಡಿಯುವ ನೀರಿಗಾಗಿ ಜನರು ಕಿಲೋ ಮೀಟರ್ ಗಟ್ಟಲೆ ಬಿಂದಿಗೆ ಹಿಡಿದು ಅಲೆದಾಡುತ್ತಿದ್ದಾರೆ. ಮಳೆಗಾಲ ಆರಂಭವಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದರೂ ಶುದ್ದ ಕುಡಿಯುವ ನೀರು ಮಾತ್ರ ಸಿಗುತ್ತಿಲ್ಲ.

ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಆಗುತ್ತಿದೆ. ಕಳೆದ 2 ತಿಂಗಳಿನಿಂದ ಗ್ರಾಮದ ಜನರು ನೀರಿಗಾಗಿ ಪರದಾಡುವಂತೆ ಆಗಿದೆ.

ಅಡವಿ ವಸತಿಗಳಿಗೆ ಎರಡು ಟ್ಯಾಂಕರ್ ನೀರಿನ ವ್ಶವಸ್ಥೆ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಎರಡು ಟ್ಶಾಂಕರ್ ನೀರಿನ ವ್ಶವಸ್ಥೆ ಜನರಿಗೆ ಸಾಕಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಬಹುಹಳ್ಳಿ ಕುಡಿಯುವ ನೀರಿನ ವ್ಶವಸ್ಥೆಯನ್ನು ತುರ್ಥಾಗಿ ಪ್ರಾರಂಭಿಸಬೇಕು. ಜನರ ಬೇಡಿಕೆಗಳು ಈಡೇರದಿದ್ದರೆ ಇಂಡಿ ಮಿನಿ ವಿಧಾನಸೌದದ ಎದುರುಗಡೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net