

ಉಡುಪಿ: ಏ.4ರಿಂದ 14ರವರೆಗೆ ಉಡುಪಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದ್ದು, ನೋಂದಣಿಗೆ ಅಭ್ಯರ್ಥಿಗಳಿಗೆ ಆಧಾರ್ ಕಾರ್ಡ್ ಡೇಟಾ ಹೊಂದಾಣಿಕೆ ಆಗದಿರá-ವುದು ಸಮಸ್ಯೆಯೊಡ್ಡುತ್ತಿದೆ.
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಸೇನೆ ಸೇರಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಆನ್ಲೈನ್ ಮೂಲಕ ಮಾ.20ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, 15 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಬಹುತೇಕರು
ಆಧಾರ್ ಕಾರ್ಡ್ ಡೇಟಾ ಹೊಂದಿಕೆಯಾಗದೆ ನೋಂದಣಿಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳುವಾಗ ಆಧಾರ್ ನಂಬರ್ ನಮೂದಿಸಿ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿರುವ ಸ್ವವಿವರ ದಾಖಲಿಸ ಬೇಕು. ಎಲ್ಲ ವಿವರ ಸೇರಿಸಿ ಸಲ್ಲಿಕೆ ಮಾಡುವಾಗ ‘ಆಧಾರ್ ಕಾರ್ಡ್ ಡೇಟಾ ಮ್ಯಾಚ್ ಆಗುತ್ತಿಲ್ಲ’ ಎಂಬ ಬರಹ ಕಂಪ್ಯೂಟರ್ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.
ಇದರಿಂದ ನೋಂದಣಿ ಪ್ರÅಯೆ ಪೂರ್ಣಗೊಳ್ಳುತ್ತಿಲ್ಲ. ಕೆಲವರು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ವಿವರ ಗಮನಿಸದೆ ಇನಿಶಿಯಲ್, ಸರ್ನೇಮ್ ವ್ಯತ್ಯಾಸ ಮಾಡಿ ಆಧಾರ್ ಮಾಡಿಸಿದಲ್ಲಿ ಈ ರೀತಿ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.