ಖಾನಾಪುರಕ್ಕೆ ಪ್ರೊಬೆಷನರಿ ಐಎಎಸ್​ ಅಧಿಕಾರಿ ಅಭಿನವ ಭೇಟಿ

17Kanapur2
Published on

ಖಾನಾಪುರ: ಪಟ್ಟಣಕ್ಕೆ ಪ್ರೊಬೆಷನರಿ ಐಎಎಸ್​ ಅಧಿಕಾರಿ ಅಭಿನವ ಜೈನ ಭೇಟಿ ನೀಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಗುರುವಾರ ಮಾಹಿತಿ ಪಡೆದರು.

ಇಲ್ಲಿನ ತಾಪಂ ಕಚೇರಿಗೆ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯಚಟುವಟಿಕೆ ಹಾಗೂ ಸಿಬ್ಬಂದಿ ಹಾಜರಾತಿ ವೀಸಿದರು. ತಾಲೂಕಿನ ಹಿರೇಹಟ್ಟಿಹೊಳಿ, ನಂದಗಡ ಹಾಗೂ ಹಲಸಿ ಗ್ರಾಪಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು. ಮನರೇಗಾ, ವಸತಿ ಹಾಗೂ ಜಲಜೀವನ ಮಿಷನ್​ ಸೇರಿ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿ ವೀಸಿದರು. ತಾಪಂ ಸಹಾಯಕ ನಿರ್ದೇಶಕ ರೂಪಾಲಿ ಬಡಕುಂದ್ರಿ, ವಿಜಯಕುಮಾರ ಕೋತಿನ್​, ವ್ಯವಸ್ಥಾಪಕ ಶ್ರೀಕಾಂತ ಸೊಪಡ್ಲ, ಸಹಾಯಕ ಲೆಕ್ಕಾಧಿಕಾರಿ ಎಸ್​.ಸಿ.ಜಾಲಗೇರಿ, ಪಿಡಿಒಗಳಾದ ರಾಜು ತಳವಾರ, ಸಾಗರಕುಮಾರ ಬಿರಾದಾರ, ನೇತ್ರಾವತಿ ಎಂ.ಡಿ.ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net