ಹುಬ್ಬಳ್ಳಿಗೆ ಬಂದ ಪ್ರೋ ಅಲ್ಟಿಮೇಟ್ ಜಿಮ್

IMG-20241123-WA0005.jpg
Published on

ಹುಬ್ಬಳ್ಳಿ: ನಗರದ ಜನರ ಆರೋಗ್ಯದ ದೃಷ್ಟಿಯಿಂದ ಚಂಡಿಗಡ ಮೂಲದ ಪ್ರೋ ಅಲ್ಟಿಮೇಟ್ ಜಿಮ್ ಶಾಖೆಯನ್ನು ಇಲ್ಲಿಯ ಕೇಶ್ವಾಪುರ ರಮೇಶ ಭವನ ಬಳಿ ಆರಂಭಿಸಲಾಗಿದ್ದು, ನ. 24ರಂದು ಸಂಜೆ 4.30ಕ್ಕೆ ಉದ್ಘಾಟಿಸಲಾಗುವುದು ಎಂದು ಶಾಖೆ ಮಾಲೀಕ ಸತೀಶ್ ಜಾದವ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಮಹಾನಗರದ ಜನತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ನೆರವಾಗಲಿದೆ ಎಂದರು.

ಪ್ರೋ ಅಲ್ಟಿಮೇಟ್ ಜಿಮ್ ಸಂಸ್ಥಾಪಕ ಅಧ್ಯಕ್ಷ ಅಭಿಷೇಕ ಗಾಗ್ನೇಜ್ ಮಾತನಾಡಿ, ದಣ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಹುಬ್ಬಳ್ಳಿಯಲ್ಲಿ ಮೊದಲ ಶಾಖೆ ಆರಂಭಿಸುತ್ತಿದ್ದೇವೆ. ಇಲ್ಲಿ ತರಬೇತಿ ಜತೆಗೆ ಉತ್ತಮ ಫಿಟ್ನೆಸ್ ಸಲುವಾಗಿ ಅತ್ಯುತ್ತಮವಾದ ನಾವೇ ತಯಾರಿಸಿದ ಜಿಮ್ ಉಪಕರಣಗಳನ್ನು ಅಳವಡಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net