ಅಮೂಲ್ಯಾ ನನಗೆ ಪರಿಚಯವಿಲ್ಲ, ವೇದಿಕೆ ಮೇಲೆ ಆಕೆ ಹೇಗೆ ಬಂದಳೋ ಗೊತ್ತಿಲ್ಲ; ವಿಚಾರಣೆಯಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ

PASHA
Published on

ಬೆಂಗಳೂರು: ನಾನು ಕಾರ್ಯಕ್ರಮದ ಆಯೋಜನೆ ಮಾಡಿದ್ದೆ ಅಷ್ಟೆ, ಅಮೂಲ್ಯಾಳಿಗೂ ನನಗೂ ಯಾವುದೇ ಪರಿಚಯವಿಲ್ಲ. ವೇದಿಕೆ ಮೇಲೆ ಆಕೆ ಹೇಗೆ ಬಂದಳೋ ಗೊತ್ತಿಲ್ಲ. ಆಕೆ ಕೈಗೆ ಮೈಕ್ ಬಂದಿದ್ದು ಹೇಗೆ, ವಿಐಪಿ ಪಾಸ್ ಪಡೆದು ವೇದಿಕೆ ಬಳಿ ಬಂದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕಾರ್ಪೊರೇಟರ್ ಇಮ್ರಾನ್ ಪಾಷಾ ವಿಚಾರಣೆಯಲ್ಲಿ ಹೇಳಿದ್ದಾರೆ.

ಸತತ ಐದು ತಾಸುಗಳವರೆಗೆ ತನಿಖಾ ತಂಡ ಇಮ್ರಾನ್ ಪಾಷಾ ಅವರನ್ನು ಮಧ್ಯೆ ಕೂರಿಸಿಕೊಂಡು ಪ್ರಶ್ನೆಗಳನ್ನು ಕೇಳಿದೆ. ಪೊಲೀಸರಿಗೆ ಸರ್ಮಪಕ ಮಾಹಿತಿ ನೀಡಿಲ್ಲ. ಪೊಲೀಸರ ಇತರೆ ಪ್ರಶ್ನೆಗಳಿಗೂ ನನಗೇನು ಗೊತ್ತಿಲ್ಲ ಸಾಹೇಬ್ರೇ ಎಂದಿದ್ದಾರೆ.

ಇಮ್ರಾನ್ ಪಾಷಾ ಅವರಿಂದ ಹತ್ತು ಮಂದಿ ಆಯೋಜಕರ ಪಟ್ಟಿ ಪಡೆದಿದ್ದಾರೆ. ಹತ್ತೂ ಮಂದಿಯ ಆಯೋಜಕರ ಹೆಸರು, ಮೊಬೈಲ್ ನಂಬರ್, ಹಾಗೂ ವಿಳಾಸವನ್ನು ತನಿಖಾ ತಂಡ ಪಡೆದಿದೆ. ಪಾಷಾ ವಿಚಾರಣೆ ನಂತರ ಉಳಿದವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

ಚಿಕ್ಕಪೇಟೆ ಎಸಿಪಿ ಮಹಾಂತ್ ರೆಡ್ಡಿ ನೇತೃತ್ವದ ತಂಡದಿಂದ ವಿಚಾರಣೆ ನಡೆಯಿತು. ಮಧ್ಯಾಹ್ನದಿಂದಲೇ ವಿಚಾರಣೆ ಆರಂಭವಾಗಿತ್ತು. ಈ ಮಧ್ಯೆ ವಿಚಾರಣೆಯಲ್ಲಿ ಇಪ್ಪತ್ತು ನಿಮಿಷಗಳ ಕಾಲ ಬ್ರೇಕ್ ನೀಡಲಾಗಿತ್ತು. ಈ ವೇಳೆ ತಮ್ಮ ವಕೀಲರನ್ನು ಠಾಣೆಯೊಳಗೆ ಕರೆಸಿ ಪಾಷಾ ಮಾತುಕತೆ ನಡೆಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net