ಕನ್ನಡಪರ ಹೋರಾಟ, ಪೊಲೀಸರಿಂದ‌ ಪ್ರಕರಣ ದಾಖಲು: ಆಕ್ರೋಶ

22cbp1-1.jpg
Published on

ಚಿಕ್ಕಬಳ್ಳಾಪುರ: ಕನ್ನಡಿಗರ ಮೇಲೆ ಮರಾಠಿ ಪುಂಡರ ದಬ್ಬಾಳಿಕೆಯನ್ನು ಖಂಡಿಸಿ, ಹೋರಾಟ ನಡೆಸಿದ ಕನ್ನಡಪರ ಸಂಟನೆಗಳ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಎ್ ಐ ಆರ್ ದಾಖಲಾಗಿದೆ.
ಎಎಸ್ಐ ಜಿ.ಶಂಕರಪ್ಪ ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ವಿ.ರವಿಕುಮಾರ್, ಉಪಾಧ್ಯಕ್ಷ ಎಸ್ಬಿಎಂ ಮಂಜುನಾಥ್, ತಾಲೂಕು ಕರವೇ (ಶಿವರಾಮೇಗೌಡ ಬಣ) ಅಧ್ಯಕ್ಷ ಲೋಕೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಡಿನ ಪರವಾಗಿ ನಡೆಸಿದ ಹೋರಾಟಗಾರರ ವಿರುದ್ಧ ನಾಡಿನ ರಕ್ಷಕರೇ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಬಾಕ್ಸ್
ಪೊಲೀಸ್ ದೂರಿನಲ್ಲೇನಿದೆ?
ಮಾ.22 ರಂದು ಬೆಳಿಗ್ಗೆ 5 ರ ವೇಳೆ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ವಿ.ರವಿಕುಮಾರ್, ಉಪಾಧ್ಯಕ್ಷ ಎಸ್ಬಿಎಂ ಮಂಜುನಾಥ್, ತಾಲೂಕು ಕರವೇ (ಶಿವರಾಮೇಗೌಡ ಬಣ) ಅಧ್ಯಕ್ಷ ಲೋಕೇಶ್  ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ರಸ್ತೆ ಮಧ್ಯೆ ನಿಂತಿದ್ದು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಪ್ರತಿಕೃತಿಗೆ ಬೆಂಕಿ ಹಚ್ಚಿ, ಮಹಾರಾಷ್ಟ್ರದ ವಿರುದ್ಧ ಕೂಗಿ ಪ್ರತಿಭಟಿಸಿದ್ದಾರೆ. ಇದಕ್ಕೆ ಅನುಮತಿ ಪಡೆದುಕೊಳ್ಳಲಾಗಿದೆಯೇ? ಎಂದು ಪ್ರಶ್ನಿಸಿದಾಗ ಇಲ್ಲ ಎಂಬ ಉತ್ತರವನ್ನು ನೀಡಿದ್ದು ಇದರಿಂದ ಸ್ಥಳವನ್ನು ತೆರವುಗೊಳಿಸಲು ಸೂಚಿಸಿದರೂ ಲೆಕ್ಕಿಸದೇ ಪ್ರತಿಭಟಿಸಲಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಎಸ್ಐ ಶಂಕರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬಾಕ್ಸ್
ನಾಡಿನ ಹೋರಾಟಕ್ಕೆ ವಿರೋಧ
ಮಾ.22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕನ್ನಡಪರ ಸಂಟನೆಗಳು ಹೋರಾಟಕ್ಕೆ ಕರೆ ನೀಡಿದ್ದವು. ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಹೋರಾಟಗಾರರು ರಸ್ತೆಗಿಳಿದು ಪ್ರತಿಭಟಿಸಿದ್ದರು. ಕರ್ನಾಟಕದಲ್ಲಿ ಮರಾಠಿ ಭಾಷೆ ಹೆಸರಿನಲ್ಲಿ ನಿಂದನೆ, ಗಲಾಟೆ, ಹಲ್ಲೆಯಂತಹ ಅಹಿತಕರ ಟನೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಬೆಳಿಗ್ಗೆ 10 ರ ಬದಲಿಗೆ ಮುಂಜಾವ 5 ರ ವೇಳೆಗೆ ಪ್ರತಿಭಟಿಸಲಾಯಿತು. ಇದಕ್ಕೆ ಆಕ್ರೋಶಗೊಂಡ ನಾಡಿನ ಪೊಲೀಸ್ ರಕ್ಷಕರು ಹೋರಾಟಗಾರರಿಗೆ ಬೆದರಿಕೆಯನ್ನೊಡ್ಡಿದ್ದಾರೆ. ಈಗ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


*ಸಂಘಟನೆಗಳ ಆಕ್ರೋಶ
ಕನ್ನಡಪರ ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡಪರ ಹೋರಾಟವನ್ನು ಬೆಂಬಲಿಸಬೇಕು ಹಾಗೂ ಹೋರಾಟಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಸಲಹೆ ನೀಡಿದ್ದರು. ನಾಡು ನುಡಿಯ ವಿಚಾರವಾಗಿ ಧಕ್ಕೆ ಬಂದಾಗಲೆಲ್ಲ ಸಂಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು ಇದಕ್ಕೆ ಪೊಲೀಸರ ಅವಾಚ್ಯ ಶಬ್ದಗಳ ನಿಂದನೆ, ಠಾಣೆಯಲ್ಲಿ ಪ್ರಕರಣ ದಾಖಲು, ವಿಚಾರಣೆಗೆ ಅಲೆದಾಟ ಸೇರಿದಂತೆ ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net