

ಆನಂದಪುರ: ಕನ್ನಡ ನಾಡು, ನುಡಿ, ಜಲ ಮತ್ತು ಸಂಸ್ಕೃತಿಗಳ ರಕ್ಷಣೆಗಾಗಿ ಸಂಘಟನೆ ನಡೆಸಿ ಶ್ರಮಿಸುತ್ತಿರುವ ಹೋರಾಟಗಾರರನ್ನು ಬಂಧಿಸದಂತೆ ಕನ್ನಡ ರಕ್ಷಣಾ ವೇದಿಕೆಯ ಅಪ್ಪು ಸೇನೆಯ ಜಿಲ್ಲಾ ಶಾಖೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಬಂಧನ ಹೆಚ್ಚಳವಾಗಿದೆ. ಕನ್ನಡ ಪರ ಸಂಘಟನೆಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.ಅಪ್ಪು ಸೇನೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಗುರುಪ್ರಸಾದ್ ಮದ್ದಲೆಸರ, ಗೌರವಾಧ್ಯಕ್ಷ ಹಿರಿಯಣ್ಯಪ್ಪ ಸಂಗಣ್ಣನಕೆರೆ, ಜಿಲ್ಲಾ ಉಪಾಧ್ಯಕ್ಷ ಆದರ್ಶ, ಸಂಘಟನಾ ಕಾರ್ಯದರ್ಶಿ ಸೋಮಶೇಖರ, ಆನಂದಪುರಂ ಹೋಬಳಿ ಅಧ್ಯಕ್ಷ ಲೋಕೇಶ್ ಅಡೂರು, ಪದಾಧಿಕಾರಿಗಳಾದ ಮೋಹನಕುಮಾರ್ ಕಾಸ್ಪಾಡಿ ಮಣಿಕಂಠ ಇರುವಕ್ಕಿ ಇತರರಿದ್ದರು.