ಏ.12,13 ರಂದು ಪ್ರೋ ಕಬಡ್ಡಿ ಪ್ರೀಮಿಯರ್ ಲೀಗ್

10 vpt 1
ರಾಮನಗರ ಫ್ರೇಂಡ್ಸ್ ಸಂಸ್ಥೆಯವತಿಯಿಂದ ಪ್ರೊ ಕಬಡ್ಡಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಲವೀಶ್, ಲತೀಶ್, ಸಂತೋಷ್ ,ಪ್ರಭು, ಜಿನೇಶ್, ಧನುಷ್ , ಸಂತೋಷ್ ಇದ್ದರು.
Published on

ವಿರಾಜಪೇಟೆ : ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ರಾಮನಗರದ ಶಾಲಾ ಮೈದಾನದಲ್ಲಿ ಪ್ರೋ ಮ್ಯಾಟ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಏ.12,13 ರಂದು ಆಯೋಜಿಸಲಾಗಿದೆ ಎಂದು ರಾಮನಗರ ಫ್ರೆಂಡ್ಸ್ ಸಂಸ್ಥೆಯ ಸದಸ್ಯ ಧನುಷ್ ತಿಳಿಸಿದರು.

ಹೆಗ್ಗಳ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ಪಂದ್ಯಾಟಗಳು ನಡೆಯಲಿದೆ. ಕಬಡ್ಡಿ ಕ್ರೀಡೆಯನ್ನು ಉತ್ಸವದ ರೀತಿಯಲ್ಲಿ ಆಚರಿಸುವಂತೆ ಸಂಸ್ಥೆ ತೀರ್ಮಾನಿಸಿದ್ದು. ಪಂದ್ಯಾಟಗಳು ಲೀಗ್ ಮಾದರಿಯಲ್ಲಿರುತ್ತದೆ. ಗ್ರಾಮಸ್ಥರು ಮತ್ತು ನಾಡಿನ ಸಮಸ್ತ ಕ್ರೀಡಾಭಿಮಾನಿಗಳು ಪಂದ್ಯಾಟಕ್ಕೆ ಆಗಮಿಸಿ ಪ್ರೋತ್ಸಾಹಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಮನಗರದ ಪ್ರೋ ಮ್ಯಾಟ್ ಕಬಡ್ಡಿ ಪ್ರೀಮಿಯರ್ ಲೀಗ್ ನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಪ್ರಭಾಕರ್ (ಪ್ರಭು), ಕ್ರೀಡಾಪಟುಗಳು ವಿರಾಜಪೇಟೆ ತಾಲೂಕಿಗೆ ಸೀಮಿತವಾಗಿರಬೇಕು. ನಿಗದಿತ ಅರ್ಜಿ ಭರ್ತಿ ಮಾಡಿ ನಿಗದಿಗೊಳಿಸಿರುವ ಹಣವನ್ನು ಮುಂಗಡವಾಗಿ ನೀಡಬೇಕು. ತಂಡ ನೋಂದಣಿಗೆ ಮಾ.20 ರಂದು ಅಂತಿಮ ದಿನವಾಗಿದೆ. ಕ್ರೀಡಾಪಟುಗಳನ್ನು ಬಿಡ್ ಮೂಲಕ ತಂಡಕ್ಕೆ ಆಯ್ಕೆಗೊಳಿಸಲಾಗುತ್ತದೆ. ಬಿಡ್ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿತೀಶ್ 7204374304 ,ಕಾರ್ತಿಕ್ 636251276 ಲತೀಶ್ 973147304 ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ರಾಮನಗರ ಫ್ರೇಂಡ್ಸ್ ಆಯೋಜಕ ಸಂಸ್ಥೆಯ ಪದಾಧಿಕಾರಿಗಳಾದ ವಿಜು ಪಿ.ಎಂ, ಸಂತೋಷ್, ಲವೀಶ್, ಜಿಷ್ಣು ಕುಮಾರ್, ಲತೀಶ್, ಜಿನೇಶ್, ಕೆ.ಸಂತೋಷ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net