ಬಿಜೆಪಿ ಪರ ಶಿಕ್ಷಣ ಇಲಾಖೆ ಸಿಬ್ಬಂದಿ ವಾಟ್ಸಪ್​ ಪ್ರಚಾರ

Pro-BJP education department staff WhatsApp campaign
ವಿಜಯಪುರದಲ್ಲಿ ರಾಜ್ಯ ದಲಿತ ಸಂರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಜಿಲ್ಲಾಧಿಕಾರಿ ಟಿ. ಭೂಬಾಲನ್​ಗೆ ಮನವಿ ಸಲ್ಲಿಸಿದರು.
Published on

ವಿಜಯಪುರ: ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಪರ ಮತಚಲಾಯಿಸುವಂತೆ ವಾಟ್ಸಪ್​ ಮೂಲಕ ಸಂದೇಶ ಕಳುಹಿಸುತ್ತಿರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ದಲಿತ ಸಂರ್ಷ ಸಮಿತಿ (ಡಿಜಿ ಸಾಗರ ಬಣ) ವತಿಯಿಂದ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಇದ್ದರೂ ಸಹ ಶಿಕ್ಷಣ ಇಲಾಖೆಗೆ ಸೇರಿದ ನೌಕರರ ಮೊ. 9945980482 ಮತ್ತು 9845495855 ನಂಬರ್​ಗಳಿಂದ ವಾಟ್ಸಪ್​ ಮೂಲಕ ನಾಮಪತ್ರ ಸಲ್ಲಿಕೆ ಹಾಗೂ ಬಹಿರಂಗ ಸಭೆಗೆ ಆಹ್ವಾನಿಸಿ ಭಾರತದ ಸಂವಿಧಾನ ಬದಲಾವಣೆ ಹಾಗೂ ಮತ್ತೊಮ್ಮೆ ನರೇಂದ್ರ ಮೋದಿಯವರು ಭಾರತದ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಕಡ್ಡಾಯವಾಗಿ ಮತ ಹಾಕಲು ವಿನಂತಿಸುತ್ತಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜಿಲ್ಲೆಯಲ್ಲಿ ಪಾರದರ್ಶಕವಾದ ಮತದಾನಕ್ಕೆ ಅವಕಾಶ ಮಾಡಿಕೊಡಲು ಅವರು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net