

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಭೋದಯ ಗೆಳೆಯರ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಬಹುಮಾನ ವಿತರಿಸಿದರು.
ಪಂದ್ಯಾವಳಿಯಲ್ಲಿ ಹಳೇಬೀಡು ಕುಮಾರ್, ಹಿರೇಮರಳಿ ದೀಪು, ಬಿ.ಟಿ.ಶ್ರೀಧರ, ಸುನೀಲ್‌ಕುಮಾರ್, ಸಿ.ಟಿ.ಶಿವರಾಜು, ದಯಾನಂದ್ ಬಾಬು, ಪಿಡಿಒ ಪ್ರಮೋದ್, ನವೀನ್, ಡಾ.ವಿಜಯಕುಮಾರ್, ಟಿ.ಕೆ.ನಾಗೇಶ್ ಹಾಗೂ ಅಭಿ ಕ್ರಮವಾಗಿ ಬಹುಮಾನ ಪಡೆದುಕೊಂಡರು. ಈ ವೇಳೆ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಸೊಸೈಟಿ ಅಶೋಕ, ಮುರುಳಿ, ಗುರು, ಶಂಕರ್ ಇತರರು ಇದ್ದರು.