ಗಿಡ ನೆಟ್ಟು ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ

makkalu
Published on

ಹೆಬ್ರಿ: ಶಾಂತಿನಿಕೇತನ ಯುವವೃಂದ, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ವಿಜಯವಾಣಿ ಸಹಕಾರದೊಂದಿಗೆ ಅನೇಕ ಸರ್ಕಾರಿ ಶಾಲೆಗಳಲ್ಲಿ ಗಿಡ ನೆಟ್ಟು ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಅನೇಕ ಶಾಲೆಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುತ್ತಿದೆ. 5ನೇ ವರ್ಷಕ್ಕೆ ಆಯೋಜಕರು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಿದ್ದಾರೆ. ಒಂದು ವರ್ಷ ವಿದ್ಯಾರ್ಥಿಗಳು ಪಾಲನೆ ಪೋಷಣೆ ಮಾಡಬೇಕು. ಪ್ರತಿ ವರ್ಷ ಉತ್ತಮವಾಗಿ ಬೆಳೆಸಿದ ತಂಡಕ್ಕೆ ಆಕರ್ಷಕ ಬಹುಮಾನವಿರಲಿದೆ. ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್, ಉಪಾಧ್ಯಕ್ಷ ಜಯಕರ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಹೆಚ್ಚು ಗಿಡ ನೆಡಬೇಕು ಎನ್ನುವುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟು ಕ್ರಿಯಾಶೀಲರಾಗಿ ಮಾಡುತ್ತೇವೆ. ಕೆಲವು ಶಾಲೆಯಲ್ಲಿ ಉತ್ತಮವಾಗಿ ಗಿಡ ಬೆಳವಣಿಗೆ ಆಗಿರುವುದನ್ನು ಕಂಡಾಗ ಮಾಡಿದ ಕೆಲಸ ಸಾರ್ಥಕ ಅನಿಸುತ್ತದೆ. -ಡಾ.ಭಾರ್ಗವಿ ಆರ್.ಐತಾಳ್, ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಇದೊಂದು ವಿನೂತನ ಕಾರ್ಯಕ್ರಮ. ಮಕ್ಕಳು ತುಂಬಾ ಆಸಕ್ತಿಯಿಂದ ಗಿಡದ ಪೋಷಣೆ ಮಾಡಿದ್ದಾರೆ. ವಿಜಯವಾಣಿ ಪತ್ರಿಕೆಯವರು ಗಿಡ ನೆಡುವ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವುದು ಶ್ಲಾಘನೀಯ. -ಮಾಲಿನಿ ಕುಚ್ಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ https://www.vijayavani.net/nammura-shikshana-ratna-award-presentation https://www.vijayavani.net/potholes-all-over-the-road

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net