

ಹೊಸಕೋಟೆ: ವಿಜಯವಾಣಿ ಪತ್ರಿಕೆ ಓದಿ ಅದರಲ್ಲಿ ನೀಡುವ ಮಾಹಿತಿ ಜತೆ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ ಬಹುಮಾನ ಪಡೆಯಿರಿ ಎಂಬ ಸ್ಪರ್ಧೆಯಲ್ಲಿ ಹೊಸಕೋಟೆ ತಾಲೂಕಿನ 13 ಸ್ಪರ್ಧಿಗಳು ವಿಜೇತರಾಗಿದ್ದು, ಅವರಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ಪ್ರಸರಣ ವಿಭಾಗದ ಪ್ರದಾನ ವ್ಯವಸ್ಥಾಪಕ ವಿದ್ಯಾಧರ್ ಮಾತನಾಡಿ, ಪತ್ರಿಕೆ ತಯಾರಾಗಬೇಕಾದರೆ ಅದರ ಹಿಂದೆ ದುಡಿಯುವ ಪ್ರಮುಖ ತಂಡಗಳು ಕಾರ್ಯನಿರ್ವಹಿಸುತ್ತವೆ, ಅದರಲ್ಲಿ ಸುದ್ದಿಮನೆ, ಜಾಹೀರಾತು ವಿಭಾಗ, ಸಂಪಾದಕರು, ಪ್ರಸರಣ ವಿಭಾಗ ಹೀಗೆ ಹಲವು ತಂಡಗಳು ಕೆಲಸ ಮಾಡುತ್ತವೆ ಎಂದರು.
ರಾಜ್ಯದ ಪ್ರತಿ ಹಳ್ಳಿಗೂ ಪತ್ರಿಕೆಯನ್ನು ಕಳುಹಿಸುವ ಕೆಲಸ ನಡೆಯುತ್ತದೆ. ಪ್ರತಿ ದಿನ ಸುದ್ದಿ ಸಮಾಚಾರ, ಕ್ರೀಡೆ, ಸಾಂಸ್ಕೃತಿಕ ಹೀಗೆ ಹಲವು ಮಾಹಿತಿಗಳನ್ನು ಓದುಗರಿಗೆ ನೀಡುತ್ತಾ ರಾಜ್ಯದ ನಂಬರ್ ಒನ್ ಪತ್ರಿಕೆ ಎನಿಸಿಕೊಂಡಿದೆ. ಇದರ ಜತೆ ಓದುಗರನ್ನು ಮತ್ತಷ್ಟು ಸಂತುಷ್ಟಪಡಿಸಲು ವಿಜಯವಾಣಿ ಓದಿ ಬಹುಮಾನ ಗೆಲ್ಲಿ ಎಂಬ ವಿಚಾರದಲ್ಲಿ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ ಎಂದರು.
ಸ್ಪರ್ಧಾ ವಿಜೇತರು : ಲಾವಣ್ಯಾ ಡಿ ಎನ್, ಸೌಶಿಕಾ, ಬಸವರಾಜಯ್ಯ, ಆರ್.ಶಾಂಭವಿ ಮನೋಜ್, ಎಸ್ ಮಾಲಾ, ವಿಜಯ್ ಕುಮಾರ್, ಬಿ.ಎಸ್ ಕೆಂಪೇಗೌಡ, ಸವಿತಾ, ಎನ್ ಅಂಬಿಕಾಪತಿ, ಆರ್.ಭಾವನಾ, ಎಚ್.ಕೆ ನಾರಾಯಣಗೌಡ, ಟಿ.ಅಂಬರೀಶ್, ಮಂಜುನಾಥ್.