ರಾಜ್ಯಮಟ್ಟದ ಕರಾಟೆಯಲ್ಲಿ ಬಹುಮಾನ

New Project (10)
Published on

ಬೆಳ್ತಂಗಡಿ: ಇಂಪಾಕ್ಟ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಪುತ್ತೂರಿನಲ್ಲಿ ಆಯೋಜಿಸಿದ್ದ ಮುಕ್ತಕರ್ನಾಟಕ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಮುಂಡಾಜೆಯ ಸಮರ್ಥ್ ಕೆ.ಎಸ್. ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಅವರ ಸಹೋದರಿ ಸಮೀಕ್ಷಾ ಎಸ್. ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಯೋಧ ಶಶಿಧರ ಕೆ.ಎಸ್ ಮತ್ತು ಭವ್ಯಾ ದಂಪತಿಯ ಮಕ್ಕಳಾಗಿದ್ದು, ಕರಾಟೆ ಶಿಕ್ಷಕ ಜಿತೇಶ್ ಬಿ.ಎಸ್. ತರಬೇತಿ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net