ರಾಷ್ಟ್ರ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಬಹುಮಾನ

29 Dwd 1 Deepa
Published on

ಧಾರವಾಡ: ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ರಾಷ್ಟ್ರೀಯ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯದ ಅಡಿ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ನಗರದ ಕ್ಯಾರಕೊಪ್ಪ ಜವಾಹರ ನವೋದಯ ವಿದ್ಯಾಲಯದ 8ನೇ ತರಗತಿಯ ವಿದ್ಯಾರ್ಥಿನಿ ದೀಪಾ ಜಿ. ತೋಪಲಗಟ್ಟಿ `ಸಮುದ್ರ ಜೀವ ಉಳಿಸಿ ಸಾಗರಗಳಲ್ಲಿ ಪ್ಲಾಸ್ಟಿಕ್ ಬೇಡ ಎಂದು ಹೇಳಿ' ಕುರಿತ ವಿಷಯದ ಚಿತ್ರ ಬಿಡಿಸಿ ಪ್ರೋತ್ಸಾಹದಾಯಕ ಬಹುಮಾನ ಪಡೆದಿದ್ದಾಳೆ. ವಿದ್ಯಾರ್ಥಿನಿಯನ್ನು ಪ್ರಾಚಾರ್ಯೆ ಹೇಮಲತಾ ಯು., ಉಪ ಪ್ರಾಚಾರ್ಯ ಸಮಿಯುಲ್ ನವನೀತರಾಜ, ಚಿತ್ರಕಲಾ ಶಿಕ್ಷಕ ರವೀಂದ್ರ ನಾಯಿಕ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net