ಕಬಡ್ಡಿಯಲ್ಲಿ ವಾಯು ಭಗತ್ ತಂಡಕ್ಕೆ ಬಹುಮಾನ

Published on

ಸಿರಿಗೇರಿ: ದಸರಾ ಹಬ್ಬದ ನಿಮಿತ್ತ ಗ್ರಾಮದ ಜನತಾ ಕಾಲನಿಯಲ್ಲಿ ವರದ ಆಂಜನೇಯ ಕ್ರೀಡಾ ತಂಡದ ವತಿಯಿಂದ ಗುರುವಾರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. 20 ತಂಡಗಳು ಭಾಗವಹಿಸಿದ್ದು, ವಾಯು ಭಗತ್ ಯರ‌್ರಂಗಳಗಿ ತಂಡ ಪ್ರಥಮ, ಸಿರಿಗೇರಿಯ ವರದ ಆಂಜನೇಯ ತಂಡ ದ್ವಿತೀಯ ಸ್ಥಾನ ಪಡೆಯಿತು. ಪ್ರಥಮ ಬಹುಮಾನ 10 ಸಾವಿರ ರೂ. ಮತ್ತು ಕಪ್ ಅನ್ನು ಕೊಂಚಿಗೇರಿ ಸಣ್ಣ ಕಾಳಪ್ಪ, ಶಿವರುದ್ರಪ್ಪ ನೀಡಿದರು. ದ್ವಿತೀಯ ಬಹುಮಾನ ಐದು ಸಾವಿರ ರೂ. ಮತ್ತು ಕಪ್ ಅನ್ನು ಕುರಿ ಸಿದ್ದ, ಎರ‌್ರೆಪ್ಪ ನೀಡಿದರು. ಪ್ರಮುಖರಾದ ಬಿ.ಮಲ್ಲಯ್ಯ ನಾಯಕ, ಭಜಂತ್ರಿ ರಮೇಶ, ಹಳ್ಳಿ ಮರದ ವೀರೇಶ್, ಶ್ರೀರಾಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net