ಉಮ್ಮಡಹಳ್ಳಿ ವಿದ್ಯಾರ್ಥಿಗಳಿಗೆ ಬಹುಮಾನ: ಮಿಮ್ಸ್‌ನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆ

Prize for Ummadahalli students Mandya
Published on

ಮಂಡ್ಯ: ವಿಶ್ವ ರೇಬಿಸ್ ದಿನದ ಅಂಗವಾಗಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ 26 ಶಾಲೆಯ 104 ವಿದ್ಯಾರ್ಥಿಗಳನ್ನು 52 ಗುಂಪಾಗಿ ಮಾಡಲಾಗಿತ್ತು. ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆಯ ಮೂಲಕ 16 ಗುಂಪು ಆಯ್ಕೆ ಮಾಡಿ, 2ನೇ ಹಂತದ ಲಿಖಿತ ಪರೀಕ್ಷೆಯನ್ನು ನಡೆಸಿ ನಾಲ್ಕು ಗುಂಪುಗಳನ್ನು ಆಯ್ಕೆ ಮಾಡಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಇದರಲ್ಲಿ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಶಾಲ್‌ರಾಜ್ ಹಾಗೂ 8ನೇ ತರಗತಿಯ ಚಿನ್ಮಯಿ ಪ್ರಥಮ ಸ್ಥಾನ ಪಡೆದುಕೊಡಿದ್ದಾರೆ. ಇವರಿಗೆ ಮೂರು ಸಾವಿರ ರೂ ನಗದು ಬಹುಮಾನ ನೀಡಲಾಯಿತು.

ವಿಜೇತರಿಗೆ ಮಿಮ್ಸ್‌ನ ಪ್ರಾಂಶುಪಾಲ ಡಾ.ಹನುಮಂತಪ್ರಸಾದ್, ಸಮೂಹ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹರೀಶ್, ಪ್ರಾಧ್ಯಾಪಕಿ ಡಾ.ಜಾಹ್ನವಿ ರಾಜಗೋಪಾಲ್, ಸಹಪ್ರಾಧ್ಯಾಪಕರಾದ ಡಾ.ಮಂಜುನಾಥ್, ಡಾ.ವಿನಯ್ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net