ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಸಿಡಿ ಕಾಲೇಜ್​ಗೆ ಬಹುಮಾನ

h16-kle comerce
Published on

ಹುಬ್ಬಳ್ಳಿ: ನಗರದ ಕೆಎಲ್​ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತರ ಕಾಲೇಜ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್​ನಲ್ಲಿ ಕೆಸಿಡಿ ಕಾಲೇಜ್ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

ಕೆಸಿಡಿ ಕಾಲೇಜ್ 10,001 ರೂ. ನಗದು(ಪ್ರಥಮ), ಜೆ.ಜಿ. ಕಾಮರ್ಸ್ ಕಾಲೇಜ್ 5001 ರೂ. (ದ್ವಿತೀಯ) ನಗದು ಬಹುಮಾನ ಪಡೆಯಿತು. ಅಪೋನಿಕ್ಸ್ ಅಕಾಡೆಮಿ, ಡಿಯರೊ ಕೆಫೆ ಆಂಡ್ ರೆಸ್ಟೊರೆಂಟ್, ಟೈಮ್ ಇನ್​ಸ್ಟಿಟ್ಯೂಟ್ ಆಂಡ್ ರೂಪ ಯುನಿಫಾಮ್್ಸರ್ ಪಂದ್ಯಾವಳಿಯ ಪ್ರಾಯೋಜಕರಾಗಿದ್ದರು.

ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಡಿ. ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net